ಮುರ್ಡೆಶ್ವರ ಠಾಣೆಗೆ ಐಜಿಪಿ ಅಮಿತ ಸಿಂಗ್ ಭೇಟಿ, ಪರಿಶೀಲನೆ

BKL IGP VISIT
Published on

ಭಟ್ಕಳ: ಪಶ್ಚಿಮ ವಲಯ ಐಜಿಪಿ ಅಮಿತ ಸಿಂಗ್ ಅವರು ಮುರ್ಡೆಶ್ವರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ಶನಿವಾರ ಭೇಟಿ ನೀಡಿದರು.

ಮೊದಲ ಬಾರಿಗೆ ಮುರ್ಡೆಶ್ವರ ಠಾಣೆಗೆ ಆಗಮಿಸಿದ ಅವರು ವಾರ್ಷಿಕ ಪರಿವೀಕ್ಷಣೆ ಕೈಗೊಂಡರು.

ಇಲಾಖೆ ಕಾರ್ಯ ವೈಖರಿ, ಕಡತಗಳ ಪರಿಶೀಲನೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಬಗ್ಗೆ ರ್ಚಚಿಸಿದರು.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು. ಜಿಲ್ಲಾ ಎಸ್ಪಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net