ಭಾರತೀಯ ಜೀವನ ಮೌಲ್ಯ ಕಡೆಗಣನೆ

Upp_Indian life
Published on

ಉಪ್ಪಿನಂಗಡಿ: ಭಾರತೀಯ ಜೀವನ ಮೌಲ್ಯ ಕಡೆಗಣಿಸಿ, ಅಂಕ ಗಳಿಕೆಯ ಶಿಕ್ಷಣದತ್ತ ಆಸಕ್ತಿ ತಾಳಿದ ಪರಿಣಾಮ ಇಂದು ಸಮಾಜದಲ್ಲಿ ನಾನಾ ಸ್ವರೂಪದ ಕ್ಲೇಶಮಯ ಸನ್ನಿವೇಶ ಕಾಣಬೇಕಾಗಿದೆ ಎಂದು ವೈದ್ಯ ಹಾಗೂ ಪರಿಸರವಾದಿ ಡಾ.ನಿರಂಜನ್ ರೈ ಹೇಳಿದರು.

ಉಪ್ಪಿನಂಗಡಿ ವೇದಶಂಕರ ನಗರದ ಶ್ರೀರಾಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ನಮ್ಮತನದ ಬಗ್ಗೆ ಅರಿವು, ಅಭಿಮಾನ ಇಲ್ಲದ ಸ್ಥಿತಿಯಲ್ಲಿ ಎಳೆಯ ಮಕ್ಕಳಿಗೆ ಭಾರತೀಯ ಜೀವನ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಶಿಕ್ಷಣವನ್ನು ಸಮಾಜದ ಸಹಕಾರದಿಂದ ಮಾಡಲಾಗುತ್ತಿದೆ ಎಂದರು.

ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ವತಿಯಿಂದ ಶಾಲಾ ಅನ್ನಬ್ರಹ್ಮ ಯೋಜನೆಗೆ ಧನಸಹಾಯವನ್ನು ಮಂಡಳಿಯ ಅಧ್ಯಕ್ಷ ಶರತ್ ಕೋಟೆ ನೇತೃತ್ವದ ತಂಡ ಹಸ್ತಾಂತರಿಸಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ ರಾವ್, ಶಾಲಾ ಆಡಳಿತದ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು.ಜಿ.ರಾಧಾ, ಶಾಲಾ ಪಾಲಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು, ಮಾತೃ ಭಾರತಿ ಅಧ್ಯಕ್ಷೆ ಸಂಧ್ಯಾ ಪ್ರಭಾ, ಮುಖ್ಯಶಿಕ್ಷಕ ರಘುರಾಮ ಭಟ್, ಶಾಲಾ ಮುಖ್ಯಶಿಕ್ಷಕಿ ವಿಮಲಾ ತೇಜಾಕ್ಷಿ, ವಿದ್ಯಾರ್ಥಿ ನಾಯಕ ಯಕ್ಷಿತ್ ಜಿ. ಮೊದಲಾದವರು ಉಪಸ್ಥಿತರಿದ್ದರು.

ಕರುಣಾಕರ ಸುವರ್ಣ, ಸುಧಾಕರ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ವೀಣಾ ಆರ್.ಪ್ರಸಾದ್, ಹರಿರಾಮಚಂದ್ರ, ಕೈಲಾರ್ ರಾಜಗೋಪಾಲ ಭಟ್, ಸುಂದರ ಶೆಟ್ಟಿ ಎಂಜಿರಪಳಿಕೆ, ವೆಂಕಟರಮಣ ರಾವ್, ಮಾಧವ ಆಚಾರ್ಯ, ಪ್ರಶಾಂತ್ ನೆಕ್ಕಿಲಾಡಿ, ವಿನೋದ್ ಕುಮಾರ್, ಸುರೇಶ್ ಅತ್ರಮಜಲು, ಉಷಾ ಮುಳಿಯ, ಜಯಶ್ರೀ ಜನಾರ್ದನ್, ವೆಂಕಪ್ಪ ಗೌಡ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net