ಹಳ್ಳಿಗಳು ಹಿಂದುಳಿಯಲು ಮೌಢ್ಯಗಳೇ ಕಾರಣ

mysore
Published on

ಮೈಸೂರು: ಗ್ರಾಮೀಣ ಜನರು ಮೌಢ್ಯದಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹಾದೇವ ಕಳವಳ ವ್ಯಕ್ತಪಡಿಸಿದರು.


ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ ಕೃಷ್ಣ ಜನಮನ ಅವರ ‘ಚಾವಡಿ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಲವು ಆಚರಣೆಗಳು, ನಂಬಿಕೆಗಳು ಹಳ್ಳಿಗಳು ಹಿಂದುಳಿಯುವುದಕ್ಕೆ ಕಾರಣವಾಗಿದೆ. ಕಲ್ಪನೆಗಳಲ್ಲಿ ನಂಬಿಕೆ ಇಡುವವರು ಹಳ್ಳಿಯ ಜನ. ಅವರ ಕಲ್ಪನೆ, ನಂಬಿಕೆಗಳನ್ನು ಅವರದ್ದೆ ಮಾನದಂಡದಲ್ಲಿ ಅಳೆಯುತ್ತಾರೆ. ಹಳೆ ಪೀಳಿಗೆಯ ಮೌಲ್ಯಗಳಿಗೆ ಹೊಸ ಪೀಳಿಗೆಯ ಮೌಲ್ಯಗಳು ಬೆರೆತಾಗ ತಲ್ಲಣಗಳು ಸೃಷ್ಟಿಯಾಗುತ್ತವೆ ಎಂದರು.


ಹಳ್ಳಿಯ ಬದುಕಿನ ಕುರಿತು ಬರೆದಂತಹ ಕಾದಂಬರಿ ಚಾವಡಿ. ಕಾದಂಬರಿಯೂ ವಿಭಿನ್ನ ಶೈಲಿ ಹಾಗೂ ವಿಚಾರಧಾರೆಯ ಮೂಲಕ ಓದುಗರನ್ನು ಆಕರ್ಷಿಸುತ್ತದೆ.

ನಾವೆಲ್ಲರೂ ಒಂದೇ ಎಂಬ ಮೌಲ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಒಬ್ಬೊಬ್ಬರ ಚಿಂತನಾ ಶೈಲಿಗಳು, ಆಚಾರ, ವಿಚಾರಗಳು ಭಿನ್ನ ಇವೆ. ಸಮಾನತೆಗೆ ಒಂದು ಹೊಸ ಅರ್ಥವನ್ನು ನೀಡಬೇಕಿದೆ ಎಂಬುದನ್ನು ಈ ಕಾದಂಬರಿಯ ಆಶಯ. ವಿಶೇಷ ಬರವಣಿಗೆಯ ಶೈಲಿಯೊಂದಿಗೆ ಹಳ್ಳಿಯ ವಾಸ್ತವತೆಯನ್ನು ಕಾದಂಬರಿಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ ಎಂದರು.


ಸಂಸ್ಕೃತಿ ಬುಕ್ ಏಜೆನ್ಸಿಯ ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ ಮಾತನಾಡಿದರು. ಭಾರತೀಯ ಭಾಷಾ ಸಂಸ್ಥಾಪನಾ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಬೆಂಗಳೂರಿನ ಕ್ರೈಸ್ತ ಕಾಲೇಜು ಉಪನ್ಯಾಸಕ ಡಾ.ಹ.ರಾ.ಮಹೇಶ್, ಹುಲ್ಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಎಂ.ಮಂಜುನಾಥ, ಜಿಲ್ಲಾ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಸ್. ನಾಗರಾಜು ಗುಂಡೇಗಾಲ, ಚಲನಚಿತ್ರ ನಿರ್ದೇಶಕ ನಾಗರಾಜು ತಲಕಾಡು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net