ವಚನ ಸಾಹಿತ್ಯದಿಂದ ಅಜ್ಞಾನ, ಅಂಧಕಾರ ದೂರ

25MDG2 UPANYASA
Published on

ಮುಂಡರಗಿ: ಜನರಲ್ಲಿನ ಅಜ್ಞಾನ, ಅಂಧಕಾರ, ಮೂಢನಂಬಿಕೆ ಮತ್ತು ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸಲು ಬಸವಾದಿ ಶರಣರ ವಚನ ಸಾಹಿತ್ಯವು ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಅತ್ಯಂತ ಸರಳ ಭಾಷೆಯಲ್ಲಿ ರಚಿತಗೊಂಡ ವಚನ ಸಾಹಿತ್ಯದ ಕುರಿತಾದ ಹೆಚ್ಚಿನ ಅಧ್ಯಯನದ ಅವಶ್ಯವಿದೆ ಎಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಸ್.ಬಿ. ಹಿರೇಮಠ ಹೇಳಿದರು.

ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕಸಾಪ, ಶಸಾಪ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶರಣ ಚಿಂತನ ಮಾಲಿಕೆ-8ರ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಪ್ರಮಥರು ನಮಗೆ ಕೊಟ್ಟ ವಚನ ಸಾಹಿತ್ಯ ಜಾಗತಿಕ ಸಾಹಿತ್ಯಕ್ಕೆ ಕನ್ನಡದ ಬಹುದೊಡ್ಡ ಉಡುಗೊರೆಯಾಗಿದೆ ಎಂದರು.

ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಈರಮ್ಮ ಕುಂದಗೋಳ ಮಾತನಾಡಿ, ಹಠ ಯೋಗಿಯಾಗಿದ್ದ ನುಲಿಯ ಚಂದಯ್ಯ ಅವರು ಕಾಯಕ ನಿಷ್ಠೆಯು ಲಿಂಗನಿಷ್ಠೆಗಿಂತ ಮಹತ್ತರವಾದದ್ದು ಎಂದು ಸಾರಿದ ಕಥನವನ್ನು ವಿವರಿಸಿ, ಕಾಯಕದಲ್ಲಿ ದೈವತ್ವವನ್ನು ಕಂಡುಕೊಂಡ ಬಸವಾದಿ ಶರಣರು ಅನುಕರಣೆಯ ಬದುಕು ಬಾಳುವುದಕ್ಕಿಂತ ಅನುಸರಣೆಯ ಬದುಕನ್ನು ಜೀವಿಸಿದರು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಪೊ›.ಎಂ.ಜಿ.ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶಸಾಪ ಗೌರವಾಧ್ಯಕ್ಷ ಪೊ›.ಆರ್.ಎಲ್.ಪೊಲೀಸ ಪಾಟೀಲ, ಎಸ್.ಸಿ. ಚಕ್ಕಡಿಮಠ, ಎಂ.ಎಸ್. ಹೊಟ್ಟಿನ, ಶಂಕರ ಕುಕನೂರ, ಲಿಂಗರಾಜ ದಾವಣಗೆರೆ, ಕೃಷ್ಣ ಸಾಹುಕಾರ, ಆರ್.ವೈ. ಪಾಟೀಲ, ಮಂಜುನಾಥ ಮುಧೋಳ, ವಿ.ಎಫ್. ಗುಡದಪ್ಪನವರ, ಯುವರಾಜ ಮುಂಡರಗಿ, ಜಯಶ್ರೀ ಅಳವಂಡಿ, ಮಹೇಶ ಮೇಟಿ, ಎಂ.ಎಸ್. ಶೀರನಹಳ್ಳಿ, ಸಂತೋಷ ಹಿರೇಮಠ, ವಿಶ್ವನಾಥ ಉಳ್ಳಾಗಡ್ಡಿ, ಜೆ.ಕುಮಾರ್ ಇತರರು ಇದ್ದರು. ಹುಲಿಗೆಮ್ಮ ಭಜಂತ್ರಿ ಪ್ರಾರ್ಥಿಸಿದರು. ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net