ಎಲ್ಲೆಡೆ ನೆಲೆಯಾಗಲಿ ಶಾಂತಿ - ಜಯಶ್ಯಾಂ ನೀರ್ಕಜೆ ಆಶಯ - ಪರ್ಯಾಲ್ತಡ್ಕದಲ್ಲಿ ಸೌಹಾರ್ದ ಇಫ್ತಾರ್

PTR_31 MAR_5
Published on

ಪುಣಚ: ಪಿರ್ಸತ್ತೆ ಚಂಙಾಯಿಮಾರ್ ಪುಣಚ (ಪ್ರೀತಿಯ ಗೆಳೆಯರು) ಆಶ್ರಯದಲ್ಲಿ ರಮಜಾನ್ ಪ್ರಯುಕ್ತ ಬೃಹತ್ ಸೌಹಾರ್ದ ಇಫ್ತಾರ್ ಕೂಟ ಸುಬ್ರಹ್ಮಣ್ಯ-ಮಂಜೇಶ್ವರ ಅಂತರ್‌ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪರ್ಯಾಲ್ತಡ್ಕದಲ್ಲಿ ನಡೆಯಿತು.

ಪುಣಚ ಶ್ರೀದೇವಿ ವಿದ್ಯಾಸಂಸ್ಥೆಯ ಸಂಚಾಲಕ, ಆರ್.ಎಸ್.ಎಸ್ ಹಿರಿಯ ಮುಖಂಡ ಜಯಶ್ಯಾಂ ನೀರ್ಕಜೆ ಮಾತನಾಡಿ, ಪುಣಚ ಗ್ರಾಮವು ಸೌಹಾರ್ದತೆಯ ಗ್ರಾಮವಾಗಿದೆ. ಇದೇ ಮಾದರಿಯಲ್ಲಿ ಶಾಂತಿ ಸೌಹಾರ್ದ ಎಲ್ಲೆಡೆ ನೆಲೆಗೊಳ್ಳಲಿ ಎಂದು ಹೇಳಿದರು.

ಪುಣಚ ಪರಿಯಾಲಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎಸ್.ಮಹಮ್ಮದ್, ಬಿಜೆಪಿ ಮುಖಂಡ ಉದಯ ಕುಮಾರ್ ದಂಬೆ, ಶ್ರೀಧರ್ ಶೆಟ್ಟಿ ದೇವರಗುಂಡಿ, ಶ್ರೀಧರ್ ಶೆಟ್ಟಿ ಬೈಲುಗುತ್ತು, ರವಿಕಿರಣ್ ಆಜೇರು, ರಾಜೇಂದ್ರ ರೈ ಬೈಲುಗುತ್ತು, ಮೌರೀಸ್ ಟೆಲೀಸ್, ಜಗನ್ನಾಥ ಶೆಟ್ಟಿ ಕೋಡಂದೂರು, ಯೂಸುಪ್ ಗೌಸಿಯಾ ಸಾಜ ಹಾಗೂ ಪುಣಚ ಮಸೀದಿ ಧರ್ಮಗುರುಗಳು ಉಪಸ್ಥಿತರಿದ್ದರು.

ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಪುಣಚ ಪರಿಸರದ ಹಾಗೂ ವಿವಿಧ ಕಡೆಗಳಿಂದ ಹಲವಾರು ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net