ಆರ್ಜಿ ಗ್ರಾಮದಲ್ಲಿ ಇಫ್ತಾರ್ ಕೂಟ

3 vpt 1.1
Published on

ವಿರಾಜಪೇಟೆ : ಮುಸ್ಲಿಮರ ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಕಲ್ಲುಬಾಯ್ಸ್ ಒಕ್ಕೂಟದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವನ್ನು ಆರ್ಜಿ ಗ್ರಾಮದ ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿ ಶಾಲಾ ಮೈದಾನದಲ್ಲಿ ಬುಧವಾರ ಏರ್ಪಡಿಸಲಾಗಿತ್ತು. ಕೂಟದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮೀಯರು ಭಾಗವಹಿಸಿ ಸೌಹಾರ್ದ ಕ್ಷಣಕ್ಕೆ ಸಾಕ್ಷಿಯಾದರು. ಮುಖಂಡ ಸುಹೈಬ್ ಫೈಝಿ ಕೊಳಕೇರಿ ಮುಖ್ಯ ಭಾಷಣ ಮಾಡಿದರು.
ಕಲ್ಲುಬಾಯ್ಸ್ ಒಕ್ಕೂಟದ ಅಧ್ಯಕ್ಷ ರಹೀಂ ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯ ಶಹದೀರ್ ಅಲಿ ಸೇರಿದಂತೆ ಕಲ್ಲುಬಾಣೆಯ ನಾಗರಿಕರು ಇದ್ದರು. ಇಫ್ತಾರ್ ಕೂಟದಲ್ಲಿ ಹಲವು ಬಗೆಯ ಹಣ್ಣುಹಂಪಲು, ತಿಂಡಿ ಗಳು, ತಂಪು ಪಾನೀಯ ಹಾಗೂ ಭೋಜನ ವಿತರಣೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net