

ಹುಬ್ಬಳ್ಳಿ: ರಂಜಾನ್ ನಿಮಿತ್ತ ಕರ್ನಾಟಕ ರಾಜ್ಯ ನದಾಫ್ ಪಿಂಜಾತ್ ಸಂಘ ಹುಬ್ಬಳ್ಳಿ ತಾಲೂಕು ಶಹರ ಹಾಗೂ ಗ್ರಾಮೀಣ ಘಟಕ ವತಿಯಿಂದ ಇಲ್ಲಿಯ ಆನಂದ ನಗರ ರೋಡ್ ಸೈಯದ್ ಫತೇಶಾವಲಿ ನಗರದ ಶಾದಿ ಮಹಲ್‌ನಲ್ಲಿ ಮಂಗಳವಾರ ಇಫ್ತಾರ್ ಕೂಟ ಹಾಗೂ ಮಗ್ರಿಜ್ ನಮಾಜ್ ಏರ್ಪಡಿಸಲಾಗಿತ್ತು.
ಸಂಘದ ಅಧ್ಯಕ್ಷ ಹಜರತ್ ಅಲಿ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಪಿ.ಬಿ. ನದಾಫ್, ಎಂ.ಎಚ್. ಬೆಂಡಿಗೇರಿ, ರಫಿಕ್ ಅಹ್ಮದ್ ದೊಡ್ಡಮನಿ, ದಾವಲಸಾಬ್ ನದಾಫ್, ಖುದಾನಸಾಬ್ ಗೂಗಲ್, ಎಂ.ಎ. ನದಾಫ್, ದಿವಾನ್‌ಸಾಬ್ ನದಾಫ್, ಅಬ್ದುಲ್ ನಬಿ ನದಾಫ್, ಆರ್.ವೈ. ನದಾಫ್, ಬಾಬು ಪಿಂಜಾರ, ಇಸ್ಮಾಯಿಲ್‌ಸಾಬ್ ನದಾಫ್, ಹಜರತಲ್ ಅಲಿ ನದಾಫ್, ಇತರರು ಇದ್ದರು.