ಸೌಹಾರ್ದಕ್ಕೆ ಇಫ್ತಾರ್ ಆಯೋಜನೆ

Iftar is organized for goodwill
ಲೋಕಾಪುರದ ಗೋಪಾಲ ಪೂಜಾರಿ ಅವರ ನಿವಾಸದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಹಸನಡೊಂಗ್ರಿ ಮಹಾಲಿಂಗಪೂರ, ಮೈಬೂಬ ರಾಮದುರ್ಗ, ಸಲೀಮ ಕೊಪ್ಪದ, ಬಂದೇನಮಾಜ ರಾಮದುರ್ಗ, ಎಸ್.ಎಂ. ರಾಮದುರ್ಗ, ಮಂಜುನಾಥ ಪೂಜಾರಿ, ಸಂತೋಷ ಗಣಾಚಾರಿ, ರಾಕೇಶ ಪಾಟೀಲ, ಬಸವರಾಜ, ಮೈಬೂಬ ಕಲಾಸಿ ಮತ್ತಿತರರಿದ್ದಾರೆ.
Published on

ಲೋಕಾಪುರ: ಇ್ತಾರ್ ಕೂಟದ ಮೂಲಕ ಸಮಾಜದ ಎಲ್ಲ ವರ್ಗದ ಜನರ ನಡುವೆ ಸೌಹಾರ್ದ ಮೂಡಿಸಲು ಸಾಧ್ಯ ಎಂದು ಯುವ ಮುಖಂಡ ಗೋಪಾಲ ಪೂಜಾರಿ ಹೇಳಿದರು.

ಅವರ ನಿವಾಸದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ರಂಜಾನ್ ಸಮಯದಲ್ಲಿ ಆಯೋಜಿಸುವ ಇ್ತಾರ್ ಕೂಟ ಸಮಾಜಕ್ಕೆ ಸಾಮರಸ್ಯದ ಸಂದೇಶ ನೀಡುವ ಆಚರಣೆಯಾಗಿದೆ ಎಂದರು.

ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಡೊಂಗ್ರಿ ಮಹಾಲಿಂಗಪೂರ ಮಾತನಾಡಿ, ಮುಸ್ಲಿಮರಿಗೆ ಪೂಜಾರಿ ಪರಿವಾರದವರು ಇ್ತಾರ್ ಕೂಟ್ ಆಯೋಜನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಡೊಂಗ್ರಿ ಮಹಾಲಿಂಗಪೂರ ಹಾಗೂ ಚಾಂದತಾರಾ ಮಸ್ಜೀದ್ ಕಮಿಟಿ ಅಧ್ಯಕ್ಷ ಮೈಬೂಬ ರಾಮದುರ್ಗ ಅವರನ್ನು ಪೂಜಾರಿ ಪರಿವಾರದವರು ಸನ್ಮಾನಿಸಿದರು.

ಪತ್ರಕರ್ತರಾದ ಸಲೀಮ ಕೊಪ್ಪದ, ಬಂದೇನಮಾಜ ರಾಮದುರ್ಗ, ವಿದ್ಯಾಚೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಂ. ರಾಮದುರ್ಗ, ಮಂಜುನಾಥ ಪೂಜಾರಿ, ಸಂತೋಷ ಗಣಾಚಾರಿ, ರಾಕೇಶ ಪಾಟೀಲ, ಬಸವರಾಜ, ಮೈಬೂಬ ಕಲಾಸಿ, ಮೋಸಿನ ಣಿಬಂದ, ಅಬ್ದುಲ್ ಡಂಗಿ, ಉಸ್ಮಾನಗಣಿ ಡಂಗಿ, ಪ್ರಭು ಬೋಳಿಶೆಟ್ಟಿ, ಬಾಬು ಕಳ್ಳಿಗುಡ್ಡ, ಸುಲ್ತಾನ ಕಲಾದಗಿ, ಬಾಬು ಗುದಗಿ, ರಾಚಣ್ಣ ಜೋಗಿ, ರಫೀಕ ಅತ್ತಾರ, ರಾಜು ಮಕಾನದಾರ, ಮೌಲಾ ಗೋಲೆವಾಲೆ, ನಬಿ ಇಂಗಳಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net