

ಕೊಪ್ಪಳ: ಕೃಷಿಯಲ್ಲಿ ಕಾಲ ಕಾಲಕ್ಕೆ ಆಗುವ ತಂತ್ರಜ್ಞಾನ ಬಳಸಿಕೊಳ್ಳಬೇಕು. ಸದ್ಯ ನ್ಯಾನೋ ಗೊಬ್ಬರ ಬಂದಿದ್ದು, ಅದನ್ನು ಬಳಕೆ ಮಾಡುವ ಮೂಲಕ ಮಣ್ಣಿನ ಲವತ್ತತೆ ಕಾಪಾಡಿಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್.ಹೇಳಿದರು.
ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕಿರಣ ಮತ್ತು ಡ್ರೋಣ್ ಪ್ರಾತ್ಯಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಬೆಳೆದಂತೆ ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರಗಳಾಗುತ್ತಿವೆ. ಅವುಗಳನ್ನು ರೈತರಿಗೆ ತಲುಪಿಸಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಸಯಮ ಉಳಿತಾಯ ಆಗಲಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಬೆಳೆ ಬೆಳೆಯಲು ಸಾಧ್ಯ. ಇ್ಕೋ ನ್ಯಾನೋ ಯೂರಿಯಾ, ಡಿಎಪಿ ಸಂಶೋಧಿಸಿದ್ದು, ಅದನ್ನು ಬಳಕೆ ಮಾಡುವುದರಿಂದ ವ್ಯರ್ಥ ತಪ್ಪಿಸಬಹುದು. ಬೆಳೆಗಳಿಗೂ ಅನುಕೂಲ. ಮಣ್ಣಿನ ಲವತ್ತತೆಯೂ ಉಳಿಯಲಿದೆ ಎಂದರು.
ಉಪನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ನ್ಯಾನೋ ರಸಗೊಬ್ಬರ ನೇರವಾಗಿ ಬೆಳೆಗೆ ಲಭಿಸಲಿದೆ. ಅನಗತ್ಯ ವ್ಯಯ ತಪ್ಪಿಸಬಹುದು. ಮಣ್ಣಿನ ಮೇಲಾಗುತ್ತಿದ್ದ ಅಡ್ಡ ಪರಿಣಾಮವೂ ಇರುವುದಿಲ್ಲವೆಂದು ತಿಳಿಸಿದರು.
ಗಂಗಾವತಿ ಕೆವಿಕೆ ವಿಜ್ಞಾನಿ ಡಾ.ರಾವೇಂದ್ರ ಮಾತನಾಡಿ, ಅತಿಯಾದ ರಸಗೊಬ್ಬರ ಬಳಕೆಯಿಂದ ಮಣ್ಣಿನ ಲವತ್ತತೆ ಹಾಳಾಗುತ್ತದೆ. ಗಾಳಿ, ನೀರು ಕಲುಷಿತಗೊಳ್ಳುತ್ತದೆ. ನ್ಯಾನೋ ಗೊಬ್ಬರ ಬಳಕೆಯಿಂದ ಅದನ್ನು ತಪ್ಪಿಸಬಹುದು ಎಂದರು.
ಇ್ಕೋ ಸಂಸ್ಥೆಯ ರಾವೇಂದ್ರ ಎನ್. ಮಾತನಾಡಿ, ರೈತರು ನ್ಯಾನೋ ರಸಗೊಬ್ಬರ ಹಾಗೂ ಕಿಸಾನ್ ಡ್ರೋಣ್ ಸೇವೆ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಕಾರ್ಯಕ್ರಮ ಬಳಿಕ ಡ್ರೋಣ್ ಪ್ರಾತ್ಯಕೆ ನೀಡಲಾಯಿತು. ಮುಖಂಡ ಅಮರೇಶ ಉಪಲಾಪುರ ಹಾಗೂ ರೈತರಿದ್ದರು.