ಬೆಂಗಳೂರಲ್ಲಿ ಇರಬೇಕಂದ್ರೆ ಹಿಂದಿ ಕಲಿ.. ಆಟೋ ಡ್ರೈವರ್​​ ಹಿಂದಿವಾಲ ನಡುವೆ ವಾಗ್ವಾದ..ವಿಡಿಯೋ ವೈರಲ್​ |Viral Video

Viral Video
Published on

Viral Video | ಬೆಂಗಳೂರಿನಲ್ಲಿ ಆಟೋ ಚಾಲಕ ಮತ್ತು ಹಿಂದಿವಾಲನ ನಡುವೆ ಕನ್ನಡ ಭಾಷೆ ಮಾತನಾಡಲು ನಡೆದ ಬಿಸಿ ಬಿಸಿ ಚರ್ಚೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ನಗರದಲ್ಲಿ ಭಾಷೆಯ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಬ್ಬ ಹಿಂದಿ ಮಾತನಾಡುತ್ತಿರುವ ವ್ಯಕ್ತಿ ಆಟೋ ಚಾಲಕನೊಂದಿಗೆ ಜಗಳವಾಡುತ್ತಿದ್ದಾನೆ. "ಬೆಂಗಳೂರಿನಲ್ಲಿ ಉಳಿಯಲು ಬಯಸಿದರೆ ಹಿಂದಿಯಲ್ಲಿ ಮಾತನಾಡಿ" ಎಂದು ಹೇಳುತ್ತಿರುವುದನ್ನು ಕಾಣಬಹುದು, ನಂತರ ಅವನ ಸ್ನೇಹಿತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ.

ಇದರಿಂದ ಸಿಟ್ಟಾದ ಆಟೋ ಚಾಲಕ, "ನೀವು ಬೆಂಗಳೂರಿಗೆ ಬಂದಿದ್ದೀರಿ, ಕನ್ನಡದಲ್ಲಿ ಮಾತನಾಡಿ. ನಾನು ಹಿಂದಿಯಲ್ಲಿ ಮಾತನಾಡುವುದಿಲ್ಲ" ಎಂದು ಹೇಳುತ್ತಾನೆ. ಈ ಜಗಳದ ಹಿಂದಿನ ಸಂದರ್ಭ ಸ್ಪಷ್ಟವಾಗಿಲ್ಲ, ಆದರೆ ಆ ವ್ಯಕ್ತಿಯ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಕನ್ನಡಿಗರಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.ಈ ಘಟನೆಯು ಬೆಂಗಳೂರಿನ ಭಾಷಾ ಸಮುದಾಯಗಳ ನಡುವಿನ ಘರ್ಷಣೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ವಿಡಿಯೋ ಬಹಿರಂಗವಾಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರಲ್ಲಿ ತೀವ್ರ ಭಿನ್ನಾಭಿಪ್ರಾಯ ಮೂಡಿದೆ, ಕೆಲವು ನೆಟ್ಟಿಗರು ಹಿಂದಿ ಮಾತನಾಡುವ ಬಗ್ಗೆ ಆ ವ್ಯಕ್ತಿಯ ನಿಲುವನ್ನು ಬೆಂಬಲಿಸಿದರೆ, ಇನ್ನು ಕೆಲವರು ಕನ್ನಡದಲ್ಲಿ ಸಂವಹನ ನಡೆಸುವ ಆಟೋ ಚಾಲಕನ ಹಕ್ಕನ್ನು ಸಮರ್ಥಿಸಿಕೊಂಡಿದ್ದಾರೆ.

ಒಬ್ಬ ಬಳಕೆದಾರನು, "ನಾನು ಕನ್ನಡ ಪರ ಗೂಂಡಾಗಿರಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾನೆ. ಅವನು ಬೇರೆಡೆಯಿಂದ ಇಲ್ಲಿಗೆ ಬಂದಿದ್ದಾನೆ ಮತ್ತು ಸ್ಥಳೀಯರು ಅವನ ಭಾಷೆಯನ್ನು ಮಾತನಾಡಬೇಕೆಂದು ನಿರೀಕ್ಷಿಸುತ್ತಾನೆ?" ಎಂದು ಒಬ್ಬ ಹೇಳಿದರೆ, ಇನ್ನೊಬ್ಬ "ಬೆಂಗಳೂರಿನ ಹೆಚ್ಚಿನ ಕನ್ನಡಿಗರಿಗೆ ಹಿಂದಿ ತಿಳಿದಿದೆ. ಹಾಗಾದರೆ ನೀವು ಕನ್ನಡದಲ್ಲಿ ಮಾತನಾಡಲು ಏಕೆ ಹಿಂಜರಿಯುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net