

ತಲ್ಲೂರ: ಗುರುವಿನ ಸನ್ಮಾರ್ಗದಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಇಂಚಲ ಶಿವಯೋಗೇಶ್ವರ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ಜೀವಾಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದ್ಯಾಮಮ್ಮದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗುರುವಿನ ಅನುಗ್ರಹದಿಂದ ಜೀವನ ಅರ್ಥಪೂರ್ಣವಾಗುತ್ತದೆ ಎಂದರು.
ಕಿಲ್ಲಾ ತೋರಗಲ್ಲ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ದೇವಾಲಯಗಳು ಜನಮನದಲ್ಲಿ ಸಾತ್ವಿಕ ಸತ್ಯ, ಶುದ್ಧ ಚೆತನ್ಯ ತುಂಬುವ ಶ್ರದ್ಧಾ ಭಕ್ತಿಯ ಕೇಂದ್ರಗಳಾಗಬೇಕು ಎಂದರು.
ಹೋಮ, ಹವನ, ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ವಾಸ್ತು ಹೋಮ, ಗಣಹೋಮ, ನವಗ್ರಹ ಶಾಂತಿ, ಕಳಸಾರೋಹಣ, ಆರತಿ, ಕುಂಭಮೇಳ, ಭಜನೆ ನಡೆದವು. ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು. ಗ್ರಾಮಸ್ಥರು ದೇವಿ ಉಡಿತುಂಬಿದರು. ಮಹಾಪ್ರಸಾದ ಜರುಗಿತು.
ನಯಾನಗರ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮುನವಳ್ಳಿ ಮುರುರಾಜೇಂದ್ರ ಸ್ವಾಮೀಜಿ, ಗುತ್ತಿಗೊಳಿ ಅಭಿನವ ರೇವಯ್ಯ ಸ್ವಾಮೀಜಿ, ಸೊಗಲ ಚಿದಾನಂದ ಅವಧೂತರು, ಹುಬ್ಬಳ್ಳಿ ಷಡರಿ ಸ್ವಾಮೀಜಿ, ರುದ್ರಾಪುರ ಸದ್ಗುರು ಬ್ರಹ್ಮಾನಂದ ಗುರುಗಳು, ಬಬಲಾದಿ ಮಠದ ಶಂಕ್ರಯ್ಯ ಮುತ್ಯಾ, ಜೀವಾಪುರ ಬಸು ಅಜ್ಜನವರು ಆಶೀರ್ವಚನ ನೀಡಿದರು.
ಸವದತ್ತಿ ಬಿಜೆಪಿ ತಾಲೂಕು ಮಂಡಲ ಅಧ್ಯ ವಿರೂಪಾ ಮಾಮನಿ ಉದ್ಘಾಟಿಸಿದರು. ವಕೀಲ ಶಿವಾನಂದ ಪಾಟೀಲ, ಸವದತ್ತಿ ಮಾಜಿ ಎಪಿಎಂಸಿ ಅಧ್ಯ ಪ್ರಕಾಶ ನರಿ, ಪಿಕೆಪಿಎಸ್ ಮಾಜಿ ಅಧ್ಯ ಮುದಕಪ್ಪ ಯರಡ್ಡಿ, ಗೌಡಪ್ಪ ನಾಯ್ಕರ, ಸವದತ್ತಿ ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ರಾಮಚಂದ್ರಪ್ಪ ಯರಡ್ಡಿ, ಯರಗಟ್ಟಿ ಎಪಿಎಂಸಿ ನಿರ್ದೇಶಕ ವೆಂಕಣ್ಣ ಯರಡ್ಡಿ, ಗುತ್ತಿಗೆದಾರ ಪ್ರವಿಣ ಸೋನವಾಲ್ಕರ, ಬಸಪ್ಪ ನರಿ, ರಾಮಪ್ಪ ಕುರಿ, ಪಿಎಸ್ಐ ಈರಪ್ಪ ರಿತ್ತಿ, ಕಲ್ಮೇಶ ಬಾಲರಡ್ಡಿ, ಶ್ರೀಕಾಂತ ಯರಡ್ಡಿ, ಬಸವರಾಜ ನರಿ, ಮುತ್ತನಗೌಡ ನಾಯ್ಕರ, ಬಸವರಾಜ ಕಡಬಿ, ಸದಾಶಿವ ಗೋಪಾಳಿ, ಲಣ ಅರಳಿಕಟ್ಟಿ, ಚನ್ನಯ್ಯ ಪೂಜೇರ, ಸುರೇಶ ಕಂಬಾರ ಇತರರಿದ್ದರು.