ಕಷ್ಟಪಟ್ಟು ಓದಿದರೆ ಜೀವನದಲ್ಲಿ ಯಶಸ್ಸು

h25-jg college
Published on

ಹುಬ್ಬಳ್ಳಿ: ನಗರದ ಜೆ.ಜಿ. ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಯದಲ್ಲಿ ಕಾಲೇಜ್‌ನ 78ನೆಯ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸಲಾಯಿತು.

ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಉದ್ಘಾಟಿಸಿ ಮಾತನಾಡಿ, ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಓದಿದವರು ದೇಶ-ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಎರಡು ವರ್ಷ ಕಷ್ಟಪಟ್ಟರೆ ಮುಂದಿನ ಐವತ್ತು ವರ್ಷ ಸುಖದಿಂದಜೀವನ ನಡೆಸಬಹುದು. ಅಂಬಾನಿ ಕೋಟ್ಯಧೀಶ್ವರ ಆಗುವುದಕ್ಕಿಂತ ಮುಂಚೆ ಪೆಟ್ರೋಲ್ ಬಂಕ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದರು. ಇವತ್ತು ದೇಶದ ದೊಡ್ಡ ಶ್ರೀಮಂತರಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಹೆಚ್ಚು ಕಷ್ಟಪಟ್ಟು ಓದಬೇಕು ಎಂದು ತಿಳಿವಳಿಕೆ ನೀಡಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ‌್ಯಾಂಕ್ ಗಳಿಸಿದ ಸಿಂಚನಾ ಹಾವನೂರ, ವಿಜಯಲಕ್ಷ್ಮೀ ಸೇಬಣ್ಣವರ, ವೈಷ್ಣವಿ ಕಲ್ಲೋಳಿಮಠ, ಜಿಲ್ಲೆಗೆ ರ‌್ಯಾಂಕ್ ಗಳಿಸಿದ 10 ವಿದ್ಯಾರ್ಥಿಗಳನ್ನು ಇದೇ ವೇಳೇ ಸನ್ಮಾನಿಸಲಾಯಿತು.

2024-25ನೇ ಶೈಕ್ಷಣಿಕ ಸಾಲಿನ ಬೆಸ್ಟ್ ಬಾಯ್ ಸಚಿನ ಪೈ, ಬೆಸ್ಟ್ ಗರ್ಲ್ ಕಲ್ಯಾಣಿ ಹಿರೇಮಠ ಅವರು ಪಡೆದುಕೊಂಡರು. ಪದವಿ ಪೂರ್ವ ಪ್ರಾಚಾರ್ಯ ಡಾ. ದತ್ತು ವಾಘಮೋಡೆ ವಾರ್ಷಿಕ ವರದಿ ಓದಿದರು. ಪದವಿ ಪ್ರಾಚಾರ್ಯ ಪ್ರೊ.ಎಸ್.ಎಲ್. ಪಾಟೀಲ ಸ್ವಾಗತಿಸಿದರು. ಪ್ರೊ. ಸೋಮಶೇಖರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net