ಶಿವಯೋಗಿಗಳ ನೆನೆದರೆ ಮುಕ್ತಿ

18mul2 NATAK SANMAN
Published on

ಮುಳಗುಂದ: ಮಹಾತ್ಮರೆಂದರೆ ದೊಡ್ಡವರು. ಅನೇಕ ಪವಾಡ ಮಾಡಿಯೇ ದೊಡ್ಡವರಾದವರು. ಅಂಥವರಲ್ಲಿ ಮಹಾಂತ ಶಿವಯೋಗಿಯವರಂಥ ಕವಿ ಇನ್ನೊಬ್ಬರಿಲ್ಲ. ಅವರನ್ನು ನೆನೆದರೆ ಮುಕ್ತಿ ಸಿಗುತ್ತದೆ. ಅವರ ನಾಟಕ ನೋಡುವುದೇ ಸೌಭಾಗ್ಯ ಎಂದು ಬಸವ ಬೆಳವಿಯ ಶರಣಬಸವ ದೇವರು ಹೇಳಿದರು.

ಪಟ್ಟಣದಲ್ಲಿ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದಿಂದ ಧಾರವಾಡದ ಡಾ. ರಾಜಶೇಖರ ಎಸ್. ಬಸೆಟ್ಟಿ ವಿರಚಿತ ‘ವೈರಾಗ್ಯನಿಧಿ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಮಹಾತ್ಮೆ’ ಎಂಬ ಭಕ್ತಿ ಪ್ರದಾನ ನಾಟಕ ಪ್ರಾರಂಭೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕದ ಕರ್ತೃ ಡಾ. ರಾಜಶೇಖರ ಎಸ್. ಬಸೆಟ್ಟಿ ಮಾತನಾಡಿ, ಕಲೆ, ರಂಗಭೂಮಿ ಉಳಿಯಬೇಕು ಎಂದರು.

ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು, ಎಂ.ಡಿ. ಬಟ್ಟೂರ, ಬಿ.ಕೆ. ಹರಪನಹಳ್ಳಿ, ಆರ್.ಸಿ. ಕಮಾಜಿ, ಎಸ್.ಎಂ. ನೀಲಗುಂದ, ಪಿ.ಎ. ವಂಟಕರ, ಡಾ. ಎಸ್.ಸಿ. ಚವಡಿ, ಅಶೋಕ ಸೊನಗೋಜಿ, ಬಸವರಾಜ ಸುಂಕಾಪೂರ, ಬಸವರಾಜ ಬಾತಾಖಾನಿ, ಪಿ.ಎಸ್. ಮರಿದೇವರಮಠ, ಇತರರಿದ್ದರು. ಶಿಕ್ಷಕ ಎಸ್.ಎಂ. ಉಜ್ಜಣ್ಣವರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net