

ಗಂಗೊಳ್ಳಿ: ಶ್ರೀ ರಾಮ ದೇವರ ಸ್ತೋತ್ರ ಮಾಡುವುದರಿಂದ ಅನಿಷ್ಟ, ಆಪತ್ತು ಪರಿಹಾರವಾಗುತ್ತದೆ. ಸಮಸ್ತ ಮೀನುಗಾರರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ಶ್ರೀರಾಮನ ಕೃಪೆಯಿಂದ ಮೀನುಗಾರರ ಕಷ್ಟ ನಿವಾರಣೆಯಾಗಿ ಇಷ್ಟಾರ್ಥ ನೆರವೇರಲಿ ಎಂದು ಶ್ರಿ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ ಹೇಳಿದರು.
ಮರವಂತೆ ಶ್ರೀರಾಮ ಮಂದಿರದಲ್ಲಿ ಮರವಂತೆಯ ಶ್ರೀದುರ್ಗಾದೇವಿ (ಧರ್ಮಶಾಸ್ತ್ರ) ಡಿಸ್ಕೋ ಫಂಡ್ ವತಿಯಿಂದ ಸೇವಾರೂಪದಲ್ಲಿ ನೀಡಿದ ಸುವರ್ಣ ಮುಖವಾಡ, ಕಿರೀಟ ಹಾಗೂ ಯಕ್ಷೇಶ್ವರಿ ಕೃಪಾ ವತಿಯಿಂದ ಸೇವಾರೂಪದಲ್ಲಿ ನೀಡಿದ ನಡುಸೊಂಟ ಪಟ್ಟಿಯನ್ನು ಸೀತಾ ಮಾತೆಗೆ ಮಂಗಳವಾರ ಸಮರ್ಪಿಸಿ ಆಶೀರ್ವಚನ ನೀಡಿದರು.
ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ಶೇಖರ ಖಾರ್ವಿ, ಮುಖಂಡರಾದ ವಾಸುದೇವ ಖಾರ್ವಿ, ವೆಂಕಟರಮಣ ಖಾರ್ವಿ, ಚಂದ್ರ ಖಾರ್ವಿ, ಸೋಮಯ್ಯ ಖಾರ್ವಿ, ಮೀನುಗಾರರ ಸೇವಾ ಸಮಿತಿ ಸದಸ್ಯರು, ಮೀನುಗಾರರು ಮತ್ತಿತರರಿದ್ದರು.