

ಸಕಲೇಶಪುರ: ಯೋಗ ಮಾಡುವುದರಿಂದ ರೋಗ ದೂರ ಓಡಿಸಬಹುದು ಎಂದು ಸುಳ್ಯ ಕ್ಷೇತ್ರದ ಶಾಸಕಿ ಬಾಗೀರಥಿ ಮುರುಳ್ಯ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶುಕ್ರವಾರ ಪಟ್ಟಣದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಭಾಂಗಣದಲ್ಲಿ ಯೋಗ ಚೇತನ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯ ಬಯಸುವ ಪ್ರತಿಯೊಬ್ಬ ವ್ಯಕ್ತಿಯು ನಿತ್ಯ ಒಂದು ಗಂಟೆ ಯೋಗಕ್ಕೆ ಸಮಯ ಮೀಸಲಿಟ್ಟರೆ ಆರೋಗ್ಯದಿಂದ ಬದುಕಬಹುದಾಗಿದೆ. ಆರೋಗ್ಯ ಬಾಗ್ಯವಿಲ್ಲದ ಬದುಕು ಬದುಕೇ ಅಲ್ಲ. ಆದ್ದರಿಂದ ದುಶ್ಚಟಗಳಿಂದ ದೂರವಿದ್ದು ಯೋಗವನ್ನು ನಿಯಮಿತವಾಗಿ ಬದುಕಿನಲ್ಲಿ ರೂಢಿಸಿಕೊಂಡರೆ ಜೀವನ ಪಾವನವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಕ್ಕೆ ಮುಂದಾಗಬೇಕು ಎಂದರು. ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಯಣ, ಜಗದೀಶ್, ಲಕ್ಷ್ಮಣ್‌ಕೀರ್ತಿ, ಮುಂತಾದವರಿದ್ದರು.