ಮಹಾತ್ಮರ ಸಂದೇಶ ಪಾಲಿಸಿದರೆ ಮುಕ್ತಿ

If you obey the message of the Mahatma, you will be liberated
If you obey the message of the Mahatma, you will be liberated
Published on

ಕುಳಗೇರಿ ಕ್ರಾಸ್: ಪುರಾಣ-ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ ಎಂದು ಗದುಗಿನ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಗೋವನಕೊಪ್ಪ ಬ್ರಹ್ಮಾನಂದರ ಜೀವನ ದರ್ಶನ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ಅನ್ನದಾಸೋಹದ ಜತೆಗೆ ಜ್ಞಾನ ದಾಸೋಹ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಟುಂಬ ಸಮೇತ ಪುರಾಣ-ಪ್ರವಚನ ಆಲಿಸಿ ಮಹಾತ್ಮರ ತತ್ವಾದರ್ಶ ಅಳವಡಿಸಿಕೊಂಡು ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಮಹಾತ್ಮರ ಸಂದೇಶ ಕೇಳುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದರು.

ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಈ ಭಾಗದಲ್ಲಿ ಗೋವನಕೊಪ್ಪ ಬ್ರಹ್ಮಾನಂದರ ಜಾತ್ರೆ ಎಲ್ಲರ ಗಮನ ಸೆಳೆಯುತ್ತಿದೆ ಎಂದರು.

ಪ್ರವಚನಕಾರರಾದ ಎಸ್.ಉಮಾಪತಿ, ಎಸ್.ಅಕ್ಕಮಹಾದೇವಿ, ಸಂಗೀತಗಾರ ಬಿ.ಚಂದ್ರು, ಕಮಿಟಿ ಅಧ್ಯಕ್ಷ ಕಿಷ್ಟಣ್ಣ, ಬಿಜಾಪೂರ, ಆರ್.ಅಚ್.ಯಾವಗಲ್, ಎನ್.ಎಚ್.ಪಾಟೀಲ, ಮುದಕಣ್ಣ.ಹೆರಕಲ್, ಹನಮಂತಗೌಡ ಪಾಟೀಲ, ಮುರಳೀಧರ ಯಡನ್ನವರ, ಚಂದ್ರಗೌಡ ಪಾಟೀಲ್, ದಾವಲ್‌ಸಾಬ ಹೊಸಮನಿ, ಪ್ರವೀಣ ಮೇಟಿ, ಸಂಗಮೇಶ ಹುರಕಡ್ಲಿ, ಎಮ್.ಎಸ್.ಮೇಟಿ, ಲಕ್ಷ್ಮಣ ದೊಡಮನಿ, ರಂಗನಗೌಡ ಪಾಟೀಲ, ಯಚ್ಚರಪ್ಪ ದೊಡಮನಿ, ಹನಮಂತಪ್ಪ ದಳಪತಿ ಇದ್ದರು.

ಶಿಕ್ಷಕರಾದ ಶರಣು ಕರಕಿಕಟ್ಟಿ ಸ್ವಾಗತಿಸಿದರು, ರಾಘವೇಂದ್ರ ಕಂದಗಲ್ ನಿರೂಪಿಸಿದರು, ಮಂಜು ದ್ಯಾವನ್ನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net