ಸದ್ಭಾವನೆಯಿಂದ ಎಲ್ಲರೊಂದಿಗೆ ಬೆರೆತರೆ ನೆಮ್ಮದಿ

4 RPT 1
ರಿಪ್ಪನ್‌ಪೇಟೆಯ ಗುಡ್ ಶೆಫರ್ಡ್ ಚರ್ಚ್‌ನ ವಾರ್ಷಿಕ ಹಬ್ಬದ ಅಂಗವಾಗಿ ವಿನಾಯಕ ವೃತ್ತದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಧರ್ಮಗುರು ರೋಮನ್ ಪಿಂಟೋ ಮಾತನಾಡಿದರು. ಧರ್ಮಗುರು ಮ್ಯಾಥ್ಯೂಸ್, ರೆ.ಾದರ್ ಅಬ್ರಹಾಂ, ಬಿನೋಯ್ ಮ್ಯಾಥ್ಯೂಸ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. ಪ್ರೀತಿ ಮತ್ತು ಕ್ಷಮೆಯಿಂದ ಜಗತ್ತನ್ನೇ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಪ್ರಭು ಏಸುವಿನ ಸಂದೇಶ ಇಂದಿಗೂ ಪ್ರಸ್ತುತ ಎಂದು ಕಬಳೆ ಸೇಂಟ್ ್ರಾನ್ಸಿಸ್ ಚರ್ಚ್‌ನ ಧರ್ಮಗುರು ರೋಮನ್ ಪಿಂಟೋ ಹೇಳಿದರು.

ಪಟ್ಟಣದ ಗುಡ್ ಶೆಫರ್ಡ್ ಚರ್ಚ್‌ನ ವಾರ್ಷಿಕ ಹಬ್ಬದ ಅಂಗವಾಗಿ ವಿನಾಯಕ ವೃತ್ತದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಭ ಸಂದೇಶ ನೀಡಿ, ಪ್ರತಿಯೊಬ್ಬರು ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾರಿಗೂ ನೆಮ್ಮದಿಯ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿನ ಪ್ರತಿಯೊಬ್ಬರು ಪ್ರೀತಿಯನ್ನು ಹಂಚಿಕೊಂಡು ಕ್ಷಮೆಯಾಚನೆ ನೀಡುವುದರ ಮೂಲಕ ಜಾತಿ, ಮತ, ಪಂಥಗಳ ನಡುವಿನ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರೊಂದಿಗೂ ಬೆರೆತರೆ ನೆಮ್ಮದಿಯ ಬದುಕನ್ನು ಕಾಣಬಹುದು ಎಂದರು.
ಗುಡ್ ಶೆಫರ್ಡ್ ಚರ್ಚ್‌ನಿಂದ ವಿನಾಯಕ ವೃತ್ತದವರೆಗೆ ಏಸುವಿನ ಪ್ರತಿಮೆಯನ್ನು ಮೆರವಣಿಗೆಯ ಮೂಲಕ ತರಲಾಯಿತು. ರಿಪ್ಪನ್‌ಪೇಟೆ, ಸಾಗರ, ಶಿವಮೊಗ್ಗ, ಹೊಸನಗರದಿಂದ ನೂರಾರು ಭಕ್ತರು ಆಗಮಿಸಿದ್ದರು. ಗುಡ್ ಶೆಫರ್ಡ್ ೆರೋ ದೇವಾಲಯದ ಧರ್ಮಗುರು ಬಿನೋಯ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆಯೊಂದಿಗೆ ಸಮಾಪ್ತಿಗೊಂಡಿತು. ಆನವಟ್ಟಿ ಕ್ರೈಸ್ತ ರಾಜ್ ಚರ್ಚ್‌ನ ಧರ್ಮಗುರು ಮ್ಯಾಥ್ಯೂಸ್, ಶಿವಮೊಗ್ಗದ ಸೋಶಿಯಲ್ ವೆಲ್‌ಫೇರ್ ಸೊಸೈಟಿ ನಿರ್ದೇಶಕ ರೆ. ಾದರ್ ಅಬ್ರಹಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net