

ತಾಂಬಾ: ಜೀವನದುದ್ದಕೂ ಒಳ್ಳೆಯ ಆದರ್ಶಗಳನ್ನು ಪಾಲಿಸುತ್ತ ಹೃದಯ ಶ್ರೀಮಂತಿಕೆಯಿಂದ ಜನರೊಡನೆ ಬದುಕುವವರು ಜಗತ್ತಿನಲ್ಲಿರುವ ಎಲ್ಲವನ್ನು ಗೆಲ್ಲಲು ಸಾಧ್ಯವಾಗುತ್ತದೆ ಶಾಸಕ ಅಶೋಕ ಮನಗೂಳಿ ಹೇಳಿದರು.
ಗ್ರಾಮದಲ್ಲಿ 15 ಲ ರೂ. ವೆಚ್ಚದಲ್ಲಿ ಹನುಮಾನ ದೇವಸ್ಥಾನ ಹಾಗೂ 10 ಲ ರೂ. ವೆಚ್ಚದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಂಗಳವಾರ ಅವರು ಮಾತನಾಡಿದರು.
ಸಿರಿ&ಸಂಪತ್ತು, ಬೆಳ್ಳಿ& ಬಂಗಾರ ಶಾಶ್ವತವಲ್ಲ. ಅಧಿಕಾರ, ಮನೆ, ಮಠ, ಯಾವುದೂ ಸ್ಥಿರವಲ್ಲ. ಎಲ್ಲರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಬೆರೆಯಬೇಕು. ಅಂದಾಗ ಮಾತ್ರ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯಿಂದ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.
ರಜಾಕ ಚಿಕ್ಕಗಸಿ, ರಾಚಪ್ಪ ಗಳೇದ, ಪರಶುರಾಮ ಬಿಸನಾಳ, ನೂರಹ್ಮದ ಅತ್ತಾರ, ಕೆ.ಎನ್. ಪಾಟೀಲ, ನಾಗಪ್ಪ ಕುರಬತ್ತಳಿ, ವಿಜಯಕುಮಾರ ದೊಡ್ಡಮನಿ, ಅಪ್ಪಸಾಹೇಬ ಅವಟಿ, ಗೋಪಾಲ ಅವರಾದಿ, ಸಿದ್ದಪ್ಪ ದಿವಟಗಿ, ತ್ತೆಸಾಬ ಉಜನಿ, ಅಮರ್ ವಸ್ತ್ರದ, ಜಕ್ಕಪ್ಪ ಹತ್ತಳ್ಳಿ ಇತರರಿದ್ದರು.