

ಹಾರೂಗೇರಿ: ದಾನ ಮಾಡಿ ಪರಮಾತ್ಮನಲ್ಲಿ ತನ್ಮಯವಾಗಿ ಬದುಕಿದರೆ ಮನುಷ್ಯ ಜನ್ಮ ಸಾರ್ಥಕ ಎಂದು ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.
ಪಟ್ಟಣದ ಚನ್ನವೃಷಭೇಂದ್ರ ಲೀಲಾಮಠದ ಶಿವಾನಂದ ಭಾರತಿ ಸ್ವಾಮೀಜಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 42ನೇ ವೇದಾಂತ ಪರಿಷತ್ ಹಾಗೂ ಜಾತ್ರಾ ಮಹೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಇಂಚಲ ಮಠದ ಪೀಠಾಧ್ಯ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ವಿವೇಕ ಮತ್ತು ಸತ್ಸಂಗವಿಲ್ಲದ ಮನುಷ್ಯ ಅಜ್ಞಾನದಲ್ಲಿ ಮುಳುಗುತ್ತಾನೆ. ಸತ್ಸಂಗದಲ್ಲಿ ಪಾಲ್ಗೊಂಡ ವ್ಯಕ್ತಿ ಸದ್ಗುಣವಂತನಾಗುತ್ತಾನೆ ಎಂದರು.
ಪೂರ್ಣಾನಂದ ಭಾರತಿ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಅನಗವಾಡಿಯ ಮಾತೋಶ್ರೀ ಅನುಸೂಯತಾಯಿ, ಬಿ.ಎಂ.ಮುಜಾವರ, ಮಲ್ಲೇಶ ಶರಣರು, ಸಚ್ಚಿದಾನಂದ ಸ್ವಾಮೀಜಿ, ಶಿವರಾಮಾನಂದ ಸ್ವಾಮೀಜಿ, ಕಲಬುರಗಿಯ ಮಾತೋಶ್ರೀ ಲಕ್ಷಿ$್ಮ ಆಶೀರ್ವಚನ ನೀಡಿದರು. ಶ್ರೀಮಠದ 5 ಕುಟುಂಬಗಳ ಭಕ್ತರು ಶ್ರೀಗಳ ತುಲಾಭಾರ ನೆರವೇರಿಸಿದರು. ಶಿವಗೊಂಡ ಧರ್ಮಟ್ಟಿ, ಲಾಲಸಾಬ್ ಜಮಾದಾರ, ಶಶಿಧರ ಶಿಂಗೆ, ರಾಜು ಕರ್ಣವಾಡಿ, ಗೋಪಾಲ ಧರ್ಮಟ್ಟಿ, ವಿಜಯ ಬಂತಿ, ತಮ್ಮಾಣಿ ಕುರಿ, ಬಾಬು ಹಳ್ಳೂರ ಇತರರಿದ್ದರು. ಶ್ರೀಮಠದ ಕಾರ್ಯದರ್ಶಿ ಅಪ್ಪಸಾಹೇಬ ಕುಲಕರ್ಣಿ ನಿರೂಪಿಸಿದರು.