ಇಷ್ಟಪಟ್ಟು ಕಲಿತರೆ ಉತ್ತಮ ಭವಿಷ್ಯ

If you like learning, you will have a better future.
ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ವಿದ್ಯಾರ್ಥಿನಿಯರು ಸ್ವಚ್ಛತಾ ಅಭಿಯಾನ ನಡೆಸಿದರು.
Published on

ವಿಜಯಪುರ: ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಕ್ಷೇತ್ರ ಕಾರ್ಯಗಳಲ್ಲಿ ತೊಡಗಿದರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗ ಅವಕಾಶ ಸಂಪಾದಿಸಲು ಸಾಧ್ಯ ಎಂದು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಮಾಲೋಚಕ ಕಲ್ಲಪ್ಪ ನಂದರಗಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ಬಾಬಾನಗರ ಗ್ರಾ.ಪಂ. ಅವರ ಸಹಯೋಗದಲ್ಲಿ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಏಳು ದಿನಗಳ ಕಾಲ ಶಿಬಿರಾರ್ಥಿಗಳೊಂದಿಗೆ ಕಳೆದ ಅನುಭವ ನನಗೆ ಅಪರೂಪದ ಸಂತೋಷ ನೀಡಿದೆ. ಶಿಬಿರದ ವೇಳೆ ಗ್ರಾಮೀಣ ಸಮೀಕ್ಷೆ, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ದೊರೆತದ್ದು ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ ಎಂದರು.

ಗ್ರಾ.ಪಂ. ಸಿಬ್ಬಂದಿ ನಾರಾಯಣ ಶಿಂದೆ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಇಂತಹ ಶಿಬಿರಗಳು ಅತ್ಯಂತ ಅಗತ್ಯವಿದೆ ಎಂದರು.

ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ಯೋಗ ಧ್ಯಾನ, ಚಿಂತನ ಮಂಥನ, ಶ್ರಮದಾನ ಕಾರ್ಯಕ್ರಮ, ಎರಡು ದಿನ ಶಿಬಿರಾರ್ಥಿಗಳು ಗ್ರಾಮದ ಒಟ್ಟು 250 ಕುಟುಂಬಗಳನ್ನು ಸಮೀಕ್ಷೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹೀಗೆ ವಿವಿಧ ಕಾರ್ಯಕ್ರಮಗಳು ನಡೆದವು.

ಗ್ರಾ.ಪಂ. ಅಧ್ಯಕ್ಷೆ ಸಾಹೇರಾಭಾನು ಏಳಾಪುರ, ಉಪಾಧ್ಯಕ್ಷ ಅಯ್ಯಗೌಡ ರುದ್ರಗೌಡರ, ಸದಸ್ಯರಾದ ಸಿದಗೊಂಡ ರುದ್ರಗೌಡ ರುದ್ರಗೌಡರ, ಅಶೋಕ ನಿಂಗನಗೌಡ ಬಿರಾದಾರ, ಪ್ರಕಾಶ ಸಿದ್ರಾಮ ಆಯತವಾಡ, ಮಹಮದಲೀಫ ಅಮೀನಸಾಬ ಮಕಾಂದಾರ, ಶ್ರೀಕಾಂತ ಭಜಂತ್ರಿ, ರಾಜಕುಮಾರ ವಾಲಿಕಾರ, ಕಲ್ಲಪ್ಪ ನಂದರಗಿ, ಸಂತೋಷಕುಮಾರ, ಜಾಕೀರ ಏಳಾಪುರ, ಮಂಜುಳಾ ಮುದಿಗೌಡರ ಮತ್ತಿತರರಿದ್ದರು.

ಶಿಬಿರದ ನಿರ್ದೇಶಕಿ ಡಾ. ಕಲಾವತಿ ಕಾಂಬಳೆ ವರದಿ ವಾಚಿಸಿದರು. ಭೂಮಿಕಾ ಕೊಣ್ಣೂರ ಸ್ವಾಗತಿಸಿದರು. ಲಕ್ಷ್ಮೀ ಹಿರೇಮಠ ನಿರೂಪಿಸಿದರು. ಶ್ರೀನಾಥ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net