

ವಿಜಯಪುರ: ದಸರಾ ಹಬ್ಬವು ಶರವನ್ನವರಾತ್ರಿ ಅಂಗವಾಗಿ ರಾಷ್ಟ್ರದಾದ್ಯಂತ ದುರ್ಗಾದೇವಿಯನ್ನು ಭಾವ&ಭಕ್ತಿಯಿಂದ ಆರಾಧಿಸಲಾಗುತ್ತದೆ. ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳಲು ನಸುಕಿನ ಜಾವದಲ್ಲಿ ಶಮಿ ವೃಕ್ಷಕ್ಕೆ (ಬನ್ನಿ ಗಿಡ) ಪೂಜೆ ಸಲ್ಲಿಸುತ್ತಾರೆ ಎಂದು ಯೋಗ ಶಿಕ್ಷಕಿ ಅಂಬಿಕಾ ರಜಪೂತ ಹೇಳಿದರು.
ನಗರದ ಅಥಣಿ ರಸ್ತೆಯ ಅಲ್&ಅಮೀನ್ ಆಸ್ಪತ್ರೆ ಬಳಿಯ ಎನ್ಜಿಒ ಕಾಲನಿಯಲ್ಲಿನ ಹನುಮಾನ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡ ಸಿ ಭಾರತೀಯ ಸಂಸತಿ&ಸಂಸ್ಕಾರದ ಪ್ರತಿಬಿಂಬ ವಿಷಯ ಕುರಿತ ಉಪನ್ಯಾಸ ನೀಡಿ, ದುರ್ಗಾದೇವಿಯು ಒಂಬತ್ತು ವಿವಿಧ ಅವತಾರಗಳನ್ನು ತಾಳಿ, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬಂತೆ ಭೂಮಿಯ ಮೇಲಿನ ದುಷ್ಟ ಶಕ್ತಿಯನ್ನು ನಾಶ ಮಾಡಿ, ಸದಾ ಒಳ್ಳೆಯತನವನ್ನು ರಸುತ್ತಾಳೆ ಎಂಬ ಪ್ರತಿತಿಯಿದೆ ಎಂದರು.
ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ಅಕ್ಕನ ಬಳಗದ ವತಿಯಿಂದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಮಹಾಂತೇಶ್ವರಿ ಪಾಟೀಲ, ಭಾರತಿ ಬಿರಾದಾರ, ಜ್ಯೋತಿ ಪಾಟೀಲ, ಬಿ.ಆರ್. ಬಿರಾದಾರ, ಶಿವಪ್ಪ ಸಾವಳಗಿ, ಬಿ.ಎನ್. ಕೂಟನೂರ, ಶಿವಾನಂದ ಬಿಜ್ಜರಗಿ, ಬಾಬು ಕೋಲಕಾರ, ಬಲವಂತ ಬಳೂಲಗಿಡದ, ಲಕ್ಷ$್ಮಣ ಶಿಂಧೆ, ಎಸ್.ಜಿ. ನಿಂಗನಗೌಡ್ರ, ಎಂ.ಎಸ್. ಖೊದ್ನಾಪೂರ ಮತ್ತಿತರರಿದ್ದರು.