ಕೆಲಸದಲ್ಲಿ ನೈಪುಣ್ಯತೆ, ಶಿಸ್ತು ಇದ್ದರೆ ಯಶಸ್ಸು

21 HHR P 06 (1)
ಇಟ್ಟಿಗೆಹಳ್ಳಿಯಲ್ಲಿ ಟೈಲರಿಂಗ್ ತರಬೇತಿ ಪೂರೈಸಿದ ಮಹಿಳೆಯರಿಗೆ ತಾಲೂಕು ಯೋಜನಾಽಕಾರಿ ಮಾಧವ ಗೌಡ ಪ್ರಮಾಣಪತ್ರ ವಿತರಿಸಿದರು. ಶೋಭಾ, ವಂದನಾ ಇತರರಿದ್ದರು.
Published on

ಹೊಳೆಹೊನ್ನೂರು: ಸದಸ್ಯರು ಯಾವುದೇ ಸ್ವ ಉದ್ಯೋಗ ಕೈಗೊಂಡರೂ ಸಂವಹನದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ತಾಲೂಕು ಯೋಜನಾಽಕಾರಿ ಮಾಧವ ಗೌಡ ಹೇಳಿದರು.
ಇಟ್ಟಿಗೆಹಳ್ಳಿಯಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ದಾರಿದೀಪ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಪ್ರೇರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ೩ ತಿಂಗಳ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಒಳ್ಳೆಯ ಮಾತಿನಿಂದ ಅತ್ಯಂತ ಕ್ಲಿಷ್ಟ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಿಕೊಳ್ಳಬಹುದು. ನಾವು ಅಭಿವೃದ್ಧಿ ಹೊಂದಲು ನಮ್ಮಲ್ಲಿಯ ಗುರಿ ಸಾಧನೆಗೆ ಶಕ್ತಿ ಮೀರಿದ ಪ್ರಯತ್ನ ಮಾಡಬೇಕು. ಮಾಡುವ ಕೆಲಸದಲ್ಲಿ ನೈಪುಣ್ಯತೆ ಹಾಗೂ ಶಿಸ್ತು ಇದ್ದರೆ ಯಶಸ್ಸು ಲಭಿಸುವುದರಲ್ಲಿ ಎರಡು ಮಾತಿಲ್ಲ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಹಿರಿದು. ಉಪ ಕಸುಬುಗಳಿಂದ ಆರ್ಥಿಕ ಸದೃಢತೆ ಸಾಽಸಲು ಸಾಧ್ಯ. ನಿಯಮಿತವಾಗಿ ಪಾವತಿ ಸದಸ್ಯರ ಏಳಿಗೆಗೆ ಶ್ರಮಿಸಬೇಕು. ಹಳ್ಳಿಗಳಲ್ಲಿ ಸ್ವ ಸಹಾಯ ಸಂಘಗಳು ಆರ್ಥಿಕ ಚೇತರಿಕೆ ನೀಡುತ್ತಿವೆ ಎಂದರು.
ಮುಖ್ಯಶಿಕ್ಷಕ ರಂಗಪ್ಪ, ಗ್ರಾಪಂ ಸದಸ್ಯೆ ಲಲಿತಮ್ಮ, ಒಕ್ಕೂಟಗಳ ಅಧ್ಯಕ್ಷೆ ಶೋಭಾ, ಮೇಲ್ವಿಚಾರಕಿ ವಂದನಾ, ಶಿಕ್ಷಕಿ ರತ್ನಮ್ಮ, ಮಣಿ ತಿಮ್ಲಪುರ, ಸೌಮ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net