ಆತ್ಮ ವಿಶ್ವಾಸವಿದ್ದರೆ ಜಗತ್ತನ್ನೇ ಗೆಲ್ಲಬಹುದು

mm 22-8
Published on

ವಿಜಯಪುರ:ವಿದ್ಯಾರ್ಥಿಗಳು ಜೀವನದಲ್ಲಿ ಅಸಾಧ್ಯದ ಮನೋಭಾವನೆ ತೊರೆದು ಹಾಕಿ ಗೆಲುವಿನ ಆತ್ಮವಿಶ್ವಾಸವನ್ನು ಹೊಂದಬೇಕು. ಸಾಧಿಸಿಯೇ ಸಾಧಿಸುತ್ತೇನೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದು ಜಮಖಂಡಿಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೈ.ವೈ. ಕೊಕ್ಕನ್ನವರ ಹೇಳಿದರು.

ನಗರದ ಚೇತನಾ ಬಿಬಿಎ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿಪ್ರೇರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಸಾಧನೆಗೆ ಬಡತನ, ವ್ಯಕ್ತಿಯ ರೂಪ, ಅಳತೆ, ಗಾತ್ರ ಮುಖ್ಯವಲ್ಲ.

ಬದಲಾಗಿ ಸಾಧಿಸುವ ಛಲ ಮುಖ್ಯ. ಒಳ್ಳೆಯ ಸಾಧಕರಾಗಲು ಉತ್ತಮ ಸಂಸ್ಕಾರ ಹೊಂದಬೇಕು.

ತಂದೆ, ತಾಯಿ, ಗುರು ಹಿರಿಯರ ಮಮಕಾರದಿಂದ ದೂರವಾಗದೆ ಮಾನವೀಯತೆ ಅರಿತು ಜೀವನ ಸಾಗಿಸುವ ಮೂಲಕ ಸಾರ್ಥಕ ಜೀವನ ನಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯೆ ರಾಜಶ್ರೀ ಜುಗತಿ ಮಾತನಾಡಿ, ಬಿಬಿಎ ಕೋರ್ಸ್​ ನಿಮಗೆ ಹಲವು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ.

ವಿದ್ಯಾರ್ಥಿಗಳು ಸಮಯದ ಮಹತ್ವ ಅರಿತು ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಎಸ್​.ಎಸ್​. ಬ್ಯಾಕೋಡ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ರೋಹಿತ ಜಿಗುತಿ, ನಿರ್ದೇಶಕ ಡಾ. ನಾಗರಾಜ ಹೇರಲಗಿ, ಸಹಾಯಕ ಆಡಳಿತಾಧಿಕಾರಿ ಪ್ರಮೋದ ಕುಲಕರ್ಣಿ, ಬಿಬಿಎ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಮಹಾಂತೇಶ ಮತ್ತಿತರರಿದ್ದರು.

ವಿಜಯಪುರದ ಚೇತನಾ ಬಿಬಿಎ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿಪ್ರೇರಣಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ. ವೈ.ವೈ. ಕೊಕ್ಕನ್ನವರ, ರಾಜಶ್ರೀ ಜುಗತಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net