

ಮುದ್ದೇಬಿಹಾಳ: ಇಪ್ಪತ್ತೈದು ವರ್ಷ ಅಧಿಕಾರ ಅನುಭವಿಸಿದವರು ವಿಧಾನಸೌಧದಲ್ಲಿ ಈ ಭಾಗದ ನೀರಾವರಿ, ಜನ ಸಾಮಾನ್ಯರ ಸಮಸ್ಯೆ ಕುರಿತು ಒಂದೇ ಒಂದು ದಿನ ಧ್ವನಿ ಎತ್ತಿದ್ದರೆ, ಮಾತನಾಡಿದ್ದರೆ ದಾಖಲೆ ಕೊಟ್ಟರೆ, ನಾನು ಅವರ ಕ್ಷಮೆ ಕೇಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ನಾಡಗೌಡ ಅಪ್ಪಾಜಿ ಅವರಿಗೆ ಸವಾಲು ಹಾಕಿದರು.
ತಾಲೂಕಿನ ಕವಡಿಮಟ್ಟಿ, ಹಿರೇಮುರಾಳ, ಅರೇಮುರಾಳ, ಜಂಗಮುರಾಳ ಗ್ರಾಮಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ನಾಡಗೌಡರಿಗೆ ಜನರ ಜೀವನದಲ್ಲಿ ಬದಲಾವಣೆ ತರುವುದಕ್ಕಿಂತ ಅಧಿಕಾರದ ಕುರ್ಚಿ ಬೇಕಾಗಿದೆ. ಅಭಿವೃದ್ಧಿಗೆ ಮತ ಹಾಕಬೇಕೋ ಅಥವಾ ನನ್ನ ಕೊನೆ ಚುನಾವಣೆ ಎನ್ನುವವರಿಗೆ ಮತ ಹಾಕಬೇಕೋ ಅನ್ನೋದನ್ನು ಜನರು ತೀರ್ಮಾನಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ, ಬಸವರಾಜ ಹೊಕ್ರಾಣಿ, ದೇವಿಂದ್ರಪ್ಪ ಮುರಾಳ, ಬಸವರಾಜ ಜೈನಾಪುರ, ಮುಖಂಡ ಬಿ.ಬಿ. ಪಾಟೀಲ ಮಾತನಾಡಿದರು.
ಮುಖಂಡರಾದ ಜೆ.ಎ. ಚಿನಿವಾರ, ಬಸನಗೌಡ ಪಾಟೀಲ, ಸಿದ್ದರಾಜ ಹೊಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ಬೀರಪ್ಪ ಹೊಕ್ರಾಣಿ, ಮಾನಪ್ಪ ಬಳಬಟ್ಟಿ, ತಮ್ಮಣ್ಣ ಪೂಜಾರಿ, ಬಾಬುಗೌಡ ಬಿರಾದಾರ, ಸಂಗಪ್ಪ ರಾಮೋಡಗಿ, ಹೊನ್ನಪ್ಪ ವಾಲಿಕಾರ, ಚಂದ್ರಶೇಖರ ನಾಗರಬೆಟ್ಟ, ಬಸವರಾಜ ಸರೂರ, ಸಿದ್ದಣ್ಣ ವಾಲಿಕಾರ, ಆಯಾ ಗ್ರಾಮಗಳ ಮುಖಂಡರು ಸೇರಿ ಹಲವರು ಪಾಲ್ಗೊಂಡಿದ್ದರು.
25 ವರ್ಷಗಳಲ್ಲಿ ಹಿಂದಿನ ಶಾಸಕರು ಏನು ಮಾಡಬಹುದಿತ್ತೋ ಅದನ್ನು ಮಾಡಲಿಲ್ಲ. ವಿಚಾರವಂತರಾಗಿರುವ ಯುವ ಜನತೆ ವ್ಯಕ್ತಿಯ ವ್ಯಕ್ತಿತ್ವ ಮತ್ತು ಅಭಿವೃದ್ಧಿ ಕೆಲಸ ನೋಡಿ ಮತ ಚಲಾಯಿಸಬೇಕು. ಭವಿಷ್ಯದಲ್ಲಿ ನಮ್ಮ ಜನ ಗುಳೇ ಹೋಗುವುದನ್ನು ತಪ್ಪಿಸಲು ಬೇಕಾಗಿರುವ ಯೋಜನೆಗಳ ನೀಲನಕ್ಷೆ ನಡಹಳ್ಳಿಯವರ ಹತ್ತಿರವಿದೆ. ಇವರು ಮತ್ತೆ ಶಾಸಕರಾದಲ್ಲಿ ಅವುಗಳೆಲ್ಲ ಕಾರ್ಯರೂಪಕ್ಕೆ ಬರಲಿವೆ. ಗಂಗಾಧರ ನಾಡಗೌಡ ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ
ಗಂಗಾಧರ ನಾಡಗೌಡ ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ
ಪಾದಯಾತ್ರೆ, ಬಂಡಿಯಾತ್ರೆ, ಬಾರುಕೋಲು ಚಳವಳಿ ಇವೆಲ್ಲ ನಾನು ರೈತರಿಗಾಗಿ ಮಾಡಿದ ಹೋರಾಟಗಳೇ ಹೊರತು ನನಗಾಗಿ ಮಾಡಿದ್ದಲ್ಲ. ಜನರನ್ನು ನಾನು ಹೃದಯದಿಂದ ಪ್ರೀತಿ ಮಾಡಿದ್ದರಿಂದ ಅವರು ಯಾವತ್ತೂ ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಜಿಲ್ಲೆಯಲ್ಲಿ ನೀರಾವರಿಗೆ ಹೋರಾಟ ಮಾಡಿದ ಏಕೈಕ ಶಾಸಕ ಎನ್ನುವ ಹೆಮ್ಮೆ ನನಗಿದೆ. ನಾನು ನಡೆಸಿದ ಹೋರಾಟಗಳು ನಮ್ಮ ಜನರಿಗೆ ಗೊತ್ತಿವೆ. ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ಅಭ್ಯರ್ಥಿ.
ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ಅಭ್ಯರ್ಥಿ.