

ಹುಬ್ಬಳ್ಳಿ: ಇಲ್ಲಿಯ ಐಬಿಎಂಆರ್ ಬಿ-ಸ್ಕೂಲ್‌ನ ಘಟಿಕೋತ್ಸವ ಹಾಗೂ ಎಂಬಿಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ (ಮೌಲ್ಯಮಾಪನ) ಡಾ. ರತ್ನಾ ಭರಮಗೌಡರ ಉದ್ಘಾಟಿಸಿ ಮಾತನಾಡಿ, ಶಿಸ್ತು, ಶ್ರದ್ಧೆ ಮತ್ತು ಸಂಸ್ಕಾರದ ಬಲದಿಂದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಬಹುದು. ತಾವು ಸೇರಿದ ಯಾವುದೇ ಹುದ್ದೆಯಲ್ಲಿ ಪ್ರಾಮಾಣಿಕತೆ ಮತ್ತು ನಂಬಿಕೆ ಉಳಿಸಿಕೊಂಡು ಉನ್ನತ ಸ್ಥಾನ ಪಡೆಯಬೇಕು ಎಂದು ಸಲಹೆ ನೀಡಿದರು.
ಐಬಿಎಂಆರ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಅಧ್ಯಕ್ಷತೆ ವಹಿಸಿದ್ದರು.
ಇನ್‌ಫೋಸಿಸ್‌ನ ಅಲ್ಲಾಭಕ್ಷ ಅಸಾದುಲ್ಲಾ, ಐಬಿಎಂಆರ್ ಸಮೂಹ ಸಂಸ್ಥೆಗಳ ನಿರ್ದೇಶಕಿ ಸುಮಾ ಮಹೇಂದ್ರಕರ, ಅಕಾಡೆಮಿಕ್ ಡೀನ್ ಡಾ. ಸದಾನಂದ ಹಾವಣಗಿ, ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಬಸರಿ, ಐಬಿಎಂಆರ್ ನಿರ್ದೇಶಕಿ ಪ್ರೊ. ರೇಖಾ ಮಹೇಂದ್ರಕರ, ಡಾ.ಎಸ್.ವಿ. ಹಿರೇಮಠ, ಪ್ರದೀಪ ಶರ್ಮಾ ಇತರರು ಇದ್ದರು.