

ಕಾರ್ಕಳ: ಕನಸು, ಛಲ, ಸ್ವಸಾಮರ್ಥ್ಯ, ಆತ್ಮ ವಿಶ್ವಾಸ ಇದ್ದಾಗ ಓರ್ವ ಯಶಸ್ವಿ ಉದ್ಯಮಿಯಾಗಲು ಸಾಧ್ಯವಿದೆ. ಪ್ರತಿಯೊಬ್ಬ ಸ್ವಉದ್ಯಮಿಯಲ್ಲಿ ವಿಶೇಷವಾದ ಕಲೆ ಇದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸ್ವ ಉದ್ಯಮಕ್ಕೆ ಸೂಕ್ತವಾದ ಹಣಕಾಸು ನೆರವು ಲಭ್ಯವಿದ್ದು ಅದರ ಉಪಯೋಗ ಪಡೆದುಕೊಂಡು ಯಶಸ್ವಿಯಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯ ಧರ್ವಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾ ಸಮುದಾಯ ಭವನದಲ್ಲಿ ಗುರುವಾರ ನಡೆದ ಕರಾವಳಿ ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್-ಇಂಡಸ್ಟ್ರಿ ವಾರ್ಷಿಕ ಸಹಮಿಲನ ಹಾಗೂ ಪ್ರೇರಣಾ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು.
ಸಿಎಸ್‌ಐ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಭೆ ಧರ್ವಾಧ್ಯಕ್ಷ ಹೇಮಚಂದ್ರ ಕುವಾರ್ ವಾತನಾಡಿದರು. ಸಂಟನೆ ಅಧ್ಯಕ್ಷ ಸಂತೋಷ್ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು.
ಫ್ರಾನ್ಸಿಸ್ ಡಿಸೋಜ ಪಲಿವಾರುಗೆ ವರ್ಷದ ಉದ್ಯಮಿ ಹಾಗೂ ಲವೀಟಾ ಅಂದ್ರಾದೆ ಉಡುಪಿ ಅವರಿಗೆ ಮಹಿಳಾ ಉದ್ಯಮಿ, ಅರುಣ್ ಸುಶೀಲ್ ಕೋಟ್ಯಾನ್ ಸುಭಾಷ್ ನಗರ ಅವರಿಗೆ ಯುವ ಉದ್ಯಮಿ ಹಾಗೂ ಡಾ. ಜೋಸೆಫ್ ಲೋಬೊ ಅವರಿಗೆ ಪ್ರಗತಿಪರ ಕೃಷಿಕ ಪ್ರೇರಣಾ ಪ್ರಶಸ್ತಿ ಪ್ರದಾನ ವಾಡಲಾಯಿತು.
ಡೊಲ್ಫಿ ಮಸ್ಕರೇನಸ್, ಲೂವಿಸ್ ಲೋಬೊ, ವಾಲ್ಟರ್ ಸಲ್ಡಾನಾ ಮತ್ತು ಜೆರಾಲ್ಡ್ ರ್ನಾಂಡಿಸ್ ಪ್ರಶಸ್ತಿ ವಿಜೇತರ ಪರಿಚಯ ನೀಡಿದರು. ಅತ್ತೂರು ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದ ಆಲ್ಬನ್ ಡಿಸೋಜ, ಸಂಟನೆ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಕೋಶಾಧಿಕಾರಿ ವ್ಯಾಕ್ಷಿಂ ಸಲ್ಡಾನಾ ಉಪಸ್ಥಿತರಿದ್ದರು.
ಜಿತೇಂದ್ರ ಫುರ್ಟಾಡೊ ಸ್ವಾಗತಿಸಿದರು. ಆಲ್ವಿನ್ ಕ್ವಾಡ್ರಸ್ ವಂದಿಸಿದರು. ತೆಲ್ಮಾ ಪಿಂಟೊ ಪ್ರಾರ್ಥನೆ ನೆರವೇರಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.