ಹಣ ಹೂಡಿ ವಂಚನೆಗೊಳಗಾಗಿದ್ದರೆ ದೂರು ನೀಡಿ

Published on

ಚನ್ನಪಟ್ಟಣ: ಮೈ ಫ್ಯೂಚರ್​ ಲೈಫ್ ಇಂಡಿಯಾ ಫೈನಾನ್ಸ್​ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರು ದಾಖಲೆಗಳ ಸಮೇತ ಕಚೇರಿಗೆ ಸಲ್ಲಿಸುವಂತೆ ಪುರ ವೃತ್ತದ ಸಿಪಿಐ ರವಿಕಿರಣ ಪ್ರಕಟಣೆ ನೀಡಿದ್ದಾರೆ.

ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ, ಹಣ ಹೂಡಿಕೆ ಮಾಡಿಸಿದರೆ ಹೆಚ್ಚಿನ ಕಮಿಷನ್​ ಕೊಡುವ ಆಮಿಷ ನೀಡಿ ಹಲವರಿಂದ ಹಣ ಪಡೆದು, ನಂತರ ವಂಚಿಸಿರುವ ಸಂಬಂಧ ಕೋಲಾರದ ವಿಜಯ್​ ಕುಮಾರ್​, ಬೆಂಗಳೂರಿನ ಲಗ್ಗೆರೆಯ ಗೋವಿಂದರಾಜು, ಪಟ್ಟಣಗೆರೆಯ ಶಿವಕುಮಾರ್​, ಚನ್ನಪಟ್ಟಣದ ಅನ್ನಪೂರ್ಣೇಶ್ವರಿ ಬಡಾವಣೆಯ ಅಭಿಲಾಷ, ರಾಮನಗರದ ಸುಶಾಂತ್​ ಕುಮಾರ್​ ಎಂಬುವವರ ವಿರುದ್ಧ ಪುರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ. ಆರೋಪಿಗಳಿಂದ ಇನ್ನೂ ಸಾಕಷ್ಟು ಜನರಿಗೆ ವಂಚನೆಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಸಿಪಿಐ ಪ್ರಕಟಣೆ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net