ಶ್ರಾವಣ ಮಾಸದಲ್ಲಿ ದೇವರ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿ

27 upbr 1-Dharma sabhe
Published on

ಉಪ್ಪಿನಬೆಟಗೇರಿ: ಹಿಂದುಗಳಿಗೆ ಶ್ರಾವಣ ಮಾಸವು ಪವಿತ್ರವಾಗಿದ್ದು, ಪ್ರತಿ ದಿನ ಗುಡಿ- ಗುಂಡಾರಗಳಿಗೆ ಹೋಗಿ ದರ್ಶನ ಪಡೆಯುವುದರಿಂದ ಅಧಿಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

ಅವರು ಉಪ್ಪಿನಬೆಟಗೇರಿ- ಹಾರೋಬೆಳವಡಿ ರಸ್ತೆಯ ಸೀಮೆಯಲ್ಲಿ ಭಾನುವಾರ ಗ್ರಾಮದೇವಿ ದ್ಯಾಮವ್ವ-ದುರ್ಗವ್ವ ದೇವಿಯರ ನೂತನ ಪಾದಗಟ್ಟೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶತಮಾನದ ಹಿಂದೆ (1852ರಲ್ಲಿ) ಇಲ್ಲಿ ನಿರ್ವಣಗೊಂಡಿದ್ದ ಪಾದಗಟ್ಟೆಯು ಇತ್ತೀಚೆಗೆ ರಸ್ತೆ ಅಗಲೀಕರಣದಿಂದಾಗಿ ತೆರವು ಮಾಡಲಾಗಿತ್ತು. ಇದೀಗ ಗ್ರಾಮಸ್ಥರೆಲ್ಲರೂ ಸೇರಿ ರಸ್ತೆಯ ಪಕ್ಕದಲ್ಲಿ ನೂತನ ಪಾದಗಟ್ಟೆ ನಿರ್ವಿುಸಿದ್ದು ಸಂತಸ ತಂದಿದೆ. ಶ್ರಾವಣ ಮಾಸದಲ್ಲಿ ಮಹಿಳೆಯರು ಬಿಡುವಿಲ್ಲದೆ ಮನೆಯಲ್ಲಿ ಹಲವು ಬಗೆಯ ಪೂಜೆಗಳು ಮತ್ತು ದೇವರ ನಾಮಸ್ಮರಣೆಯಲ್ಲಿ ತೊಡಗಿರುತ್ತಾರೆ. ಅವರು ಭಕ್ತಿಯಿಂದ ಮಾಡುವ ಪೂಜೆಗಳಿಗೆ ದೇವರು ಇಷ್ಟಾರ್ಥ ಸಿದ್ಧಿಸುವ ಜೊತೆಗೆ ನಾಡಿಗೆ ಉತ್ತಮ ಮಳೆ ನೀಡಿ ಬೆಳೆಗಳಿಗೆ ಉತ್ತಮ ಬೆಲೆ ನೀಡಲಿ ಎಂದರು.

ಬೆಳಗ್ಗೆ ಸ್ಥಳೀಯ ವೇದಮೂರ್ತಿ ವಿರೂಪಾಕ್ಷಯ್ಯ ಇಂಚಗೇರಿಮಠ ಅವರು ಉಭಯ ದೇವಿಯವರ ಪಾದಗಟ್ಟಿಗೆ ರುದ್ರಾಭಿಷೇಕ ಹಾಗೂ ವಿವಿಧ ಬಗೆಯ ಪೂಜಾ ಕೈಂಕರ್ಯ ನೆರವೇರಿಸಿದರು.

ನಂತರ ಗ್ರಾಮದ ಮುತೆôದೆಯರು ಹಾಗೂ ಜೋಗಮ್ಮನವರು ಸೇರಿ ದೇವಿಗೆ ಉಡಿ ತುಂಬಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಉಪಾಧ್ಯಕ್ಷ ವೀರಣ್ಣಾ ಪರಾಂಡೆ, ವಿದ್ಯಾದಾನ ಸಮಿತಿ ಉಪಾಧ್ಯಕ್ಷ ಚನ್ನಬಸಪ್ಪ ಮಸೂತಿ, ಕಲ್ಲಪ್ಪ ಪುಡಕಲಕಟ್ಟಿ, ಮಲ್ಲಣ್ಣಾ ಅಷ್ಟಗಿ, ಬಸವರಾಜ ಬೆಳವಡಿ, ಶಂಕರ ಯಲಿಗಾರ, ಸಾತಪ್ಪ ಬೀಡಿ, ಫಕೀರಪ್ಪ ಮಡಿವಾಳರ, ಕೃಷ್ಣಾ ಬುದ್ನಿ, ಗಂಗಪ್ಪ ಮಡಿವಾಳರ, ಮಹಾಲಿಂಗ ಆಯಟ್ಟಿ, ಶಂಕರ ಪೂಜಾರ, ಈರಣ್ಣಾ ಮಡಿವಾಳರ, ನಾಗಪ್ಪ ದಿವಟಗಿ, ಶಂಕ್ರಪ್ಪ ಯಡಳ್ಳಿ, ಬಸವರಾಜ ಮಸೂತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net