

ಕಡೂರು: ಧರ್ಮ, ದೇವರು, ಸಂಸ್ಕೃತಿ ಇವುಗಳು ಕೇವಲ ಜಾತ್ರೆಗಳಿಗೆ ಸೀಮಿತವಾಗದೆ, ಅವುಗಳನ್ನು ಅನುಸರಿಸುವ ಕಡೆಗೂ ಚಿಂತನೆ ನಡೆಸಬೇಕು ಎಂದು ಪುಷ್ಪಾಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕಾಮೇನಹಳ್ಳಿ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿ ನೂತನ ದೇವಾಲಯದ ಪ್ರವೇಶ, ಕಳಶ ಪ್ರತಿಷ್ಟಾಪನೆ, ವೀರಭದ್ರೇಶ್ವರ ಸ್ವಾಮಿ, ಶ್ರೀಚೌಡೇಶ್ವರಿ ದೇವಿಯ ನೂತನ ವಿಗ್ರಹ ಪ್ರತಿಷ್ಟಾಪನೆ ಮತ್ತು ಕುಂಬಾಭಿಷೇಕದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಇಂದಿನ ಪೈಪೋಟಿ ಯುಗದಲ್ಲಿ ಏನನ್ನು ಓದಬೇಕು ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳು, ಪಾಲಕರಿದ್ದಾರೆ. ನೀವು ಏನನ್ನಾದರೂ ಓದಿ, ಯಾವುದಾದರೂ ಓದಿ, ಜ್ಞಾನ ಎಲ್ಲಿ ಸಿಗುವುದನ್ನು ಓದಿದಾಗ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ. ದಕ್ಷ ಬ್ರಹ್ಮನ ಒಂದೇ ಒಂದು ತಪ್ಪಿನಿಂದ ಶಿವಪುರಾಣ ನಡೆಯಿತು. ಒಂದು ತಪ್ಪಿನಿಂದ ರಾಮಯಣ, ಒಂದು ಮಾತಿನಿಂದ ಮಹಾ ಭಾರತ ನಡೆಯಿತು. ಈ ರೀತಿ ಆಗಬಾರದು ಎಂದರೆ ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ದೇವರಿಗೆ ಎಲ್ಲ ದಿನವೂ ಒಂದೇ, ದಿನಗಳಲ್ಲಿ ತಾರತಮ್ಯ ಸಲ್ಲದು. ಆಧುನಿಕತೆ ಬೆಳೆದಂತೆ ನಾವು ಹಿಂದೆ ಹೋಗುತ್ತಿದ್ದೆವೆ. ಆಧುನಿಕತೆಯ ಬೆಳವಣಿಗೆಯೊಂದಿಗೆ ಧಾರ್ಮಿಕ, ವೈಚಾರಿಕ ಮತ್ತು ಆಧ್ಯಾತ್ಮಿಕವಾಗಿಯೂ ಬೆಳವಣಿಗೆಯಾಗಬೇಕು. ಧರ್ಮ, ಸಂಸ್ಕೃತಿ ಕಾಪಾಡಬೇಕು. ಅಧಿಕಾರ ಮತ್ತು ಶ್ರೀಮಂತಿಕೆ ಎಷ್ಟಿದ್ದರೂ, ಸಮಾಜದಲ್ಲಿ ಎಷ್ಟೇ ದೊಡ್ಡವರಾದರೂ ಆಚಾರ, ಧರ್ಮ ಪಾಲಿಸಬೇಕು ಎಂದು ತಿಳಿಸಿದರು.
ಸಾಹಿತಿ ಚಟ್ನಹಳ್ಳಿ ಮಹೇಶ್, ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಾರ್ಯದರ್ಶಿ ಯೋಗೀಶ್, ಗ್ರಾಪಂ ಸದಸ್ಯ ಷಣ್ಮುಖಪ್ಪ, ಉಪನ್ಯಾಸಕ ಕೆ.ಪಿ.ರವಿಕುಮಾರ್, ಕೆ.ಆರ್.ಮಲ್ಲಿಕಾರ್ಜುನಪ್ಪ ವೆಂಕಟೇಶ್, ನಾಗಭೂಷಣ್, ರವಿಕುಮಾರ್, ಲೋಕೇಶ್, ಮಂಜುನಾಥ್, ಗುಣಸಾಗರ ವಿಜಯ್‌ಕುಮಾರ್, ಚಿಕ್ಕದೇವನೂರು ರವಿ ಮತ್ತಿತರಿದ್ದರು.