ಮಾದಕ ವ್ಯಸನಿಗಳಾದಲ್ಲಿ ಜೀವನ ಹಾಳು

4 KMP 05
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಚಾಲನೆ ನೀಡಿದರು. ಪ್ರಮುಖರಾದ ಶ್ರೀನಿವಾಸರೆಡ್ಡಿ, ಜಿಲಾನ್‌ಸಾಬ್ ಬಡಿಗೇರ, ರಾಘವೇಂದ್ರ, ಜಗದೀಶ ಪೂಜಾರ್ ಇತರರಿದ್ದರು.
Published on

ಕಂಪ್ಲಿ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಮಾದಕವಸ್ತು ವಿರೋಧಿ ದಿನ ಕಾರ್ಯಕ್ರಮ ಗುರುವಾರ ನಡೆಯಿತು.

ಪ್ರಾಚಾರ್ಯ ಶ್ರೀನಿವಾಸ್‌ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಮುಕ್ತರಾದಲ್ಲಿ ಉತ್ತಮ ಆರೋಗ್ಯದೊಂದಿಗೆ ಜೀವನ ಸಾಗಿಸಲು ಸಾಧ್ಯ. ಮಾದಕ ವ್ಯಸನಿಗಳಾದಲ್ಲಿ ಜೀವನ ಹಾಳಾಗಲಿದ್ದು, ದುಶ್ಚಟಗಳಿಂದ ವಿಮುಖರಾಗುವಂತೆ ಸಲಹೆ ನೀಡಿದರು. ಟ್ರಸ್ಟ್ ಜಿಲ್ಲಾ ನಿದೇರ್ಶಕ ರೋಹಿತಾಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯಶಿಕ್ಷಕ ಜಿಲಾನ್‌ಸಾಬ್ ಬಡಿಗೇರ, ಟ್ರಸ್ಟ್ ಯೋಜನಾಧಿಕಾರಿ ರಾಘವೇಂದ್ರ, ಪ್ರಮುಖರಾದ ಜಗದೀಶ ಪೂಜಾರ್, ಸಹಾಯಕ ಪ್ರಾಧ್ಯಾಪಕರಾದ ಎಂ.ಪಿ.ಬಾಲಾಜಿ, ಡಾ.ಚಂದ್ರಶೇಖರ ವಿ.ಬಿಳೇಗುಡ್ಡ, ಕೃಷಿ ಅಧಿಕಾರಿ ಸಂಜುಕುಮಾರ್ ಇತರರಿದ್ದರು.

ಎಮ್ಮಿಗನೂರು ಗ್ರಾಪಂ ವ್ಯಾಪ್ತಿಯ ಹೊಸ ನೆಲ್ಲ್ಲೂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ಶಿಕ್ಷಕ ಎಸ್.ರಾಮು, ವಲಯ ಮೇಲ್ವಿಚಾರಕ ಮಂಜುನಾಥ, ಸೇವಾ ಪ್ರತಿನಿಧಿ ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net