ದೌರ್ಜನ್ಯಕ್ಕೆ ಒಳಗಾದರೆ ನ್ಯಾಯ ನೀಡಿ

Untitled-3
ನೆಲಮಂಗಲ ಟೌನ್​ ಠಾಣೆಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿರುವ ಪರಿಶಿಷ್ಟ ಜಾತಿ ಪಂಗಡದ ಸಂಟನೆಗಳ ಮುಖಂಡರು.
Published on

ನೆಲಮಂಗಲ : ದಲಿತರ ಮೇಲಿನ ದೌರ್ಜನ್ಯ ಹಾಗೂ ದಲಿತರ ಜಮೀನು ಕಬಳಿ ಪ್ರಕರಣ ನಡೆದಾಗ ಕಾಯ್ದೆಯ ಪ್ರಕಾರ ತನಿಖೆ ನಡೆಸಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ನಗರದ ಟೌನ್​ ಠಾಣೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪರಿಶಿಷ್ಟ ಜಾತಿ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ದಲಿತ ಸಂಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್​.ಭಾಸ್ಕರ್​ ಪ್ರಸಾದ್​, ಪರಿಶಿಷ್ಟ ಜಾತಿ ಪಂಗಡದವರ ಮೇಲೆ ಕೆಲ ರಿಯಲ್​ ಎಸ್ಟೇಟ್​ ಏಜೆಂಟ್​ಗಳು ದಲಿತರ ಭೂಮಿ ಆಕ್ರಮವಾಗಿ ಕಬಳಿಕೆ ಮಾಡುವ ಉದ್ದೇಶದಿಂದ ಅವರಿಗೆ ಮಂಜೂರಾದ ಜಮೀನನ್ನು ಕಾನೂನು ಬಾಹಿರವಾಗಿ ಬರೆಸಿಕೊಳ್ಳುತ್ತಿದ್ದಾರೆ. ಪ್ರಶ್ನೆ ಮಾಡಿದ್ದ ಕುಟುಂಬಗಳನ್ನು ಬೆದರಿಸುತ್ತಿದ್ದು, ಕೂಡಲೇ ಪೊಲೀಸರು ದಲಿತರಿಗೆ ರಕ್ಷಣೆ ಜತೆಗೆ ನ್ಯಾಯ ದೊರಕಿಸಬೇಕು ಎಂದು ಮನವಿ ಮಾಡಿದರು.

ದಲಿತ ಕೂಲಿ ಕಾರ್ಮಿಕ ಸಂಟನೆ ಅಧ್ಯಕ್ಷ ಗಂಗಬೈಲಪ್ಪ ಮಾತನಾಡಿ, ನಗರ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕೆಲ ಅಕ್ರಮಗಳಿಗೆ ಸಿಬ್ಬಂದಿಯೇ ಸಹಕಾರ ನೀಡುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಐದು ವರ್ಷ ಮೇಲ್ಪಟ್ಟು ಠಾಣೆಗಳಲ್ಲಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ನಗರದ ಮುಖ್ಯರಸ್ತೆಯಲ್ಲಿ ಅನೇಕ ಮಂದಿ ರಸ್ತೆಗೆ ಬದಿಯಲ್ಲಿ ಅಕ್ರಮ ಅಂಗಡಿ ನಿರ್ಮಾಣ ಮಾಡಿದ್ದು, ಅವುಗಳನ್ನು ತೆರವುಗೊಳಿಸಬೇಕು. ಬಿಲಾಲ್​ನಗರ ಸೇರಿ ಕೆಲವೆಡೆ ಗಾಂಜಾ ಮಾರಾಟ ನಡೆಯುತ್ತಿದ್ದು, ಇಲಾಖೆ ನಿಗಾ ವಹಿಸುವಂತೆ ಜಯನಗರ ಮಹದೇವ್​ ತಿಳಿಸಿದರು. ಎಸಿ, ಎಸ್ಟಿಯವರ ಮೇಲೆ ದೌರ್ಜನ್ಯ ನಡೆಸಿದ್ದರೆ ಯಾವರೀತಿ ಶಿೆಯಾಗುತ್ತದೆ ಎಂಬುದನ್ನು ಪೊಲೀಸ್​ ಇಲಾಖೆಯಿಂದ ಮೇಲ್ವರ್ಗದ ಜನರಿಗೆ ಅರಿವು ಮೂಡಿಸಬೇಕು ಎಂದು ಟಿಎಪಿಸಿಎಂಎಸ್​ ಅಧ್ಯಕ್ಷ ನರಸಿಂಹಮೂರ್ತಿ ಮನವಿ ಮಾಡಿದರು.

ಸಹಾಯವಾಣಿಗೆ ಕರೆ ಮಾಡಿ : ಕಂದಾಯ ಇಲಾಖೆ ಸಂಬಂಧಪಟ್ಟ ವಿಷಯಗಳು ಪೊಲೀಸ್​ ಇಲಾಖಾ ವ್ಯಾಪ್ತಿಗೆ ಬರುವುದಿಲ್ಲ. ಕಾನೂನು ರೀತಿಯಲ್ಲಿ ಪರಿಶಿಷ್ಟ ಸಮುದಾಯದವರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದು. ಮುಖಂಡರು ತಿಳಿಸಿದ್ದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗ್ಗೆ ಹರಿಸಲಾಗುತ್ತಿದೆ. ಯಾವುದೇ ರೀತಿ ತೊಂದರೆಯಾದಲ್ಲಿ 112 ಸಹಾಯವಾಣಿಗೆ ಕೆರೆ ಮಾಡಿ ಮಾಹಿತಿ ನೀಡುವಂತೆ ಡಿವೈಎಸ್​ಪಿ ಜಗದೀಶ್​ ತಿಳಿಸಿದರು. ನಗರ ಪೊಲೀಸ್​ ಠಾಣ್​ ಇನ್ಸ್​ಸ್ಪೆಕ್ಟರ್​ ಭರತ್​ಗೌಡ, ಸಬ್​ ಇನ್​ಸ್ಪೆಕ್ಟರ್​ ನಂಜಯ್ಯ, ಎಎಸ್​ಐ ಬಿ.ಎಸ್​.ರು, ಚಿಕ್ಕಣ್ಣ, ಸಿಬ್ಬಂದಿ ಚನ್ನೇಗೌಡ, ಪ್ರದಿಪ್​, ಕಾಂಗ್ರೆಸ್​ ಎಸ್ಸಿ ಬ್ಲಾಕ್​ ಅಧ್ಯಕ್ಷ ವೆಂಕಟೇಶ್​, ರಾಜ್ಯ ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷ ದಿಲೀಪ್​ಕುಮಾರ್​, ಪ.ಜಾತಿ, ಪಂಗಡದ ಸಂಟನೆಗಳ ಮುಖಂಡರಾದ ನಾರಾಯಣ್​ಮೂರ್ತಿ, ನಂದಕುಮಾರ್​, ಗಂಗಾಂಧರ್​, ಅರುಣ್​ಕುಮಾರ್​, ರವಿಕುಮಾರ್​, ಪ್ರಸನ್ನ, ಚೇತನ್​, ನಾಗೇಂದ್ರ, ಗುರುಪ್ರಸಾದ್​, ಮಂಜಮ್ಮ ಇದ್ದರು.

ರೌಡಿ ಪಟ್ಟಿಯಲ್ಲಿ ಹೋರಾಟಗಾರ ಕೈಬಿಡಿ : 2006ರಲ್ಲಿ ಹೋರಾಟ ಮಾಡುವಾಗ ನಾಲ್ಕೆ$ದು ಪರಿಶಿಷ್ಟ ಜಾತಿ ಪಂಗಡದ ಸಂಟನೆಗಳ ಮುಖಂಡರನ್ನು ರೌಡಿ ಪಟ್ಟಿಗೆ ಸೇರಿಸಿದ್ದಾರೆ. ಸಮುದಾಯದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದ ಪ.ಜಾತಿ, ಪಂಗಡದ ಸಂಟನೆಗಳ ಮುಖಂಡರನ್ನು ರೌಡಿ ಪಟ್ಟಿಯಿಂದ ಕೈ ಬಿಡುವಂತೆ ಪ.ಜಾತಿ, ಪಂಗಡದ ಸಂಟನೆಗಳ ಮುಖಂಡರು ಸಭೆಯಲ್ಲಿ ಡಿವೈಎಸ್​ಪಿ ಅವರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net