

ಮಾನ್ವಿ: ಆರೋಗ್ಯವಾಗಿದ್ದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ. ಉಚಿತ ಆರೋಗ್ಯ ಶಿಬಿರಗಳನ್ನು ಬಡವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ರು ಹೇಳಿದರು.
ಪಟ್ಟಣದ ಕಲ್ಮಠ ವಿರೂಪಾಕ್ಷೇಶ್ವರ ಆಯುರ್ವೇದಿಕ್ ಕಾಲೇಜ್ ಮತ್ತು ಆಸ್ಪತ್ರೆ ಹಾಗೂ ಬೆಂಗಳೂರಿನ ಸಪ್ತಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗಂಭೀರ ಕಾಯಿಲೆಗಳಿಗೂ ಒಂದೇ ಸ್ಥಳದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ದೊರೆಯಲಿ ಎನ್ನುವ ಉದ್ದೇಶದಿಂದ ನುರಿತ ತಜ್ಞವೈದ್ಯರಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಶಿಬಿರದಲ್ಲಿ, ನೇತ್ರ ತಪಾಸಣೆ, ಹೃದಯದ ಕಾಯಿಲೆ, ಎಲುಬುಗಳಿಗೆ ಸಂಬಂಧಿಸಿದ ಕಾಯಿಲೆಗಳು, ಕ್ಯಾನ್ಸರ್, ನರರೋಗ, ಸಾಮಾನ್ಯ ಕಾಯಿಲೆಗಳು, ಶಸ್ತ್ರಚಿಕಿತ್ಸೆ ಕುರಿತು ತಜ್ಞ ವೈದ್ಯರು ತಪಾಸಣೆ ನಡೆಸಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಿದರು.
ವಿರೂಪಾಕ್ಷೇಶ್ವರ ಆಯುರ್ವೇದಿಕ್ ಕಾಲೇಜ್ ಮತ್ತು ಆಸ್ಪತ್ರೆ ಪ್ರಾಚಾರ್ಯ ಡಾ.ಜೀವನೇಶ್ವರಯ್ಯ, ಉಪ ಪ್ರಾಚಾರ್ಯ ಡಾ.ಸುಮಂಗಲಾ ಹಿರೇಮಠ, ಆರೋಗ್ಯ ಶಿಬಿರದ ಸಂಯೋಜಕರಾದ ಡಾ.ಪೃಥ್ವಿ ಕುಮಾರ, ಡಾ.ಶಿವರಾಜ ಒಡೆಯರ್, ಡಾ.ವಿಶ್ವೇಶ್ವರಯ್ಯ ಹಿರೇಮಠ, ಡಾ.ಶ್ರೀಕಾಂತ, ಡಾ.ಪವನ್ ದಾನಿ, ಡಾ.ಶರಣಮ್ಮ, ಡಾ.ರವಿಕಾಂತ, ಡಾ.ಹರ್ಷ ಸತ್ಯನಾರಾಯಣ, ಡಾ.ರಾಜೀವ್, ಎಕೋ ಟೆಕ್ನಿಷಿಯನ್ ಪ್ರವೀಣ್, ವಿಕಾಸ್ ಇತರರಿದ್ದರು.