ಯೋಗ ಅಳವಡಿಸಿಕೊಂಡರೆ ರೋಗ ದೂರ

22 RON
Published on

ರೋಣ: ಯೋಗ ಮತ್ತು ಆಯುರ್ವೇದ ಒಂದೇ ನ್ಯಾಣದ ಎರಡು ಮುಖಗಳು. ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಯೋಗ ಮಾಡುವವರು ಯಾವಾಗಲೂ ಸದೃಢರಾಗಿರುತ್ತಾರೆ ಇಟಗಿ ಗ್ರಾಮದ ಉದ್ಯಮಿ ಮಲ್ಲಸರ್ಜಾ ದೇಸಾಯಿ ಹೇಳಿದರು.
ಪಟ್ಟಣದ ಅಚೀವರ್ಸ್‌ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಎಲ್.ಐ. ದಿಂಡೂರ ಆಂಗ್ಲ ಮಾಧ್ಯವ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶಶಿಧರ ದಿಂಡೂರ ಮಾತನಾಡಿ, ಭಾರತ ದೇಶದ ಸಂಪತ್ತು ಯೋಗ. ಖುಷಿ-ಮುನಿಗಳು ಯೋಗಾಸನ ಮಾಡಿ ಪ್ರಕೃತಿಯೊಂಗೆ ಹೇಗೆ ಹೊಂದಿಕೊಳ್ಳಬಹುದು ಎಂಬ ಉದಾಹರಣೆಗಳು ಇಂದಿಗೂ ಕಾಣಸಿಗುತ್ತವೆ. ಇಂತಹ ಅದ್ಭುತವಾದ ಯೋಗ 2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಕ್ಕೆ ಪರಿಚಯಿಸಿ, ಜೂನ್ 21ರಂದು ಯೋಗ ದಿನಾಚರಣೆಗೆ ಕರೆ ನೀಡಿದರು. ಇಂದು ವಿಶ್ವದ 180 ರಾಷ್ಟ್ರಗಳು ಯೋಗದ ಲಾಭ ತಿಳಿದು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದು ಹೆಮ್ಮೆಯ ವಿಷಯ. ಇಂತಹ ಅನೇಕ ಆಚಾರ ವಿಚಾರಗಳಿಂದ ಭಾರತ ವಿಶ್ವ ಗುರು ಎನ್ನಿಸಿಕೊಳ್ಳುತ್ತಿದೆ ಎಂದರು.
ನಿವೃತ್ತ ಮಾಜಿ ಸೈನಿಕ, ಇಳಕಲ್ ಪಟ್ಟಣದ ಯುವ ವರ್ಗ ಸೈನಿಕ ತರಬೇತಿ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ ಕಾಳೆ ಮಾತನಾಡಿದರು. ಕಾರಹುಣ್ಣಿಮೆಯ ಅಂಗವಾಗಿ ಗಾಳಿಪಟ ಹಾರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶಶಿಧರ ದಿಂಡೂರ ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು. 25 ವಿದ್ಯಾರ್ಥಿಗಳು ಯೋಗ ದಿನದ ಭಾಷಣ ಮಾಡಿದರು. 400 ವಿದ್ಯಾರ್ಥಿಗಳು ಬಣ್ಣದ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಇಂಜಿನಿಯರ್ ಭರತಕುಮಾರ ಮಿರ್ಜಿ, ಮಂಜುನಾಥ ಸೂಡಿ, ಮುಖ್ಯ ಶಿಕ್ಷಕ ಕುಮಾರ ಅಸೂಟಿ, ನಿವೇದಿತಾ ಬೇವಿನಕಟ್ಟಿ, ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net