ಭಾವೈಕ್ಯ ಸಂದೇಶ ಅಳವಡಿಸಿಕೊಂಡರೆ ಅಲ್ಲಾಹನ ಕೃಪೆಗೆ ಪಾತ್ರ

17 GJD 1 BAKRID
Published on

ಗಜೇಂದ್ರಗಡ: ಮನದ ಅಹಂಭಾವ ತ್ಯಾಗಮಾಡಿ ಶ್ರದ್ಧೆ, ಭಕ್ತಿಯ ಪರಿಪಾಲನೆಯೊಂದಿಗೆ ಸೃಷ್ಟಿಕರ್ತನಲ್ಲಿ ಶರಣಾಗಿ ಇಸ್ಲಾಮಿನ ಭಾವೈಕ್ಯ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದಾಗ ಅಲ್ಲಾಹನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಮೌಲಾನಾ ಖುಶತ್ತಾರ್ ನೂರಾನಿ ಹೇಳಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಆಚರಣೆ ನಿಮಿತ್ತ ಸೋಮವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗ್ರಂಥ ಪಠಿಸಿದರು.

ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ ತ್ಯಾಗ, ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯಾಗಿದೆ ಎಂದರು.

ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಹಸನಸಾಬ ತಟಗಾರ, ಪುರಸಭೆ ವಿಪಕ್ಷ ನಾಯಕ ಮುರ್ತಜಾ ಡಾಲಾಯತ, ಸುಭಾನಸಾಬ ಆರಗಿದ್ದಿ, ಮಾಸುಮಲಿ ಮದಗಾರ, ದಾವಲಸಾಬ ತಾಳಿಕೋಟಿ, ಬಾಬುಸಾಬ ಗೋಡೆಕಾರ, ಫಯಾಜ್ ತೋಟದ, ಇಮ್ರಾನ್ ಅತ್ತಾರ, ಇದ್ದರು.

ಗೋಗೇರಿಯಲ್ಲಿ: ತಾಲೂಕಿನ ಗೋಗೇರಿ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಅಸ್ಲಾಂ ಲಿಂಗಸೂರು ಪ್ರಾರ್ಥನೆ ಮಾಡಿಸಿದರು. ಆರ್.ಐ. ಭಾಗವಾನ ಮಾತನಾಡಿದರು. ಹುಸೇನಸಾಬ ಬಡಿಗೇರ, ಶಾಬುಸಾಬ ನದಾಫ್, ಐ.ಎಚ್. ಭಾಗವಾನ, ರೈಮಾನಸಾಬ ನದಾಫ್, ಕೆ.ಕೆ. ಭಾಗವಾನ, ರಾಜು ವಾಲಿಕಾರ, ಆರ್.ಕೆ. ಭಾಗವಾನ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net