ಶ್ರದ್ಧೆಯಿದ ಆರಾಧಿಸಿದರೆ ಆಯಸ್ಸು ವೃದ್ಧಿ

kls horanadu
Published on

ಳಸ: ಶ್ರೀಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಶ್ರೀ ಅನ್ನಪೂರ್ಣೇಶ್ವರಿಗೆ ಜಗಜ್ಜನನೀ ದುರ್ಗಾದೇವಿಯ ನಾಲ್ಕನೇ ಸ್ವರೂಪ ಮೃಗಾರೂಢಾ ಕೂಷ್ಮಾಂಡ ಅಲಂಕಾರ ಪೂಜೆಯನ್ನು ಭಾನುವಾರ ನೆರವೇರಿಸಲಾಯಿತು.

ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಶ್ರೀಸೂಕ್ತ ಹೋಮ ನೆರವೇರಿತು.
ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪತ್ತಿ ಮಾಡುವ ಮತ್ತು ಇವಳ ವಾಹನಸಿಂಹವಾಗಿರುವ ಕಾರಣ ಇವಳನ್ನು ಮೃಗಾರೂಢಾ ಕೂಷ್ಮಾಂಡಾದೇವೀ ಎಂದು ಕರೆಯುತ್ತಾರೆ. ಇವಳಿಗೆ ಎಂಟು ಭುಜಗಳಿದ್ದು ಅಷ್ಟಭುಜಾದೇವಿ ಎಂದು ಖ್ಯಾತಳಾಗಿದ್ದಾಳೆ. ಇವಳ ಏಳು ಕೈಗಳಲ್ಲಿ ಕಮಂಡಲು, ಧನುಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಇವೆ. ಇವಳನ್ನು ಭಕ್ತಿ, ನಿಷ್ಠೆ, ಶ್ರದ್ಧೆಯಿದ ಆರಾಧಿಸಿದರೆ ಆಯಸ್ಸು, ಯಶ, ಬಲ, ಆರೋಗ್ಯದ ವೃದ್ಧಿಯಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ ವಿದುಷಿ ಮಾಲಿನಿ ರಾಮಸುಬ್ರಹ್ಮಣ್ಯ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ವಿದುಷಿ ಸ್ನೇಹ ವಿದ್ಯಾಶಂಕರ್ ನೃತ್ಯ ವೃಂದದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಅ.7ರಂದು ಮಕರಾರೂಢಾ ಸ್ಕಂದಮಾತ ಅಲಂಕಾರ ಪೂಜೆ, ಶ್ರೀಲಲಿತಾ ಮೂಲಮಂತ್ರ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವೀಣಾ ವಾದನ, ಸಂಜೆ ಭರತನಾಟ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net