ಹೆಣ್ಣು ಪ್ರಗತಿ ಸಾಧಿಸಿದರೆ ದೇಶ ಅಭಿವೃದ್ಧಿ

SIRIGERE KADLEGUDDU 02 (2)
Published on

ಸಿರಿಗೆರೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಸದಾ ಕಾಲ ಪ್ರಸ್ತುವಾಗಿದ್ದು, ಮಹಿಳೆಯರು ಸಮಗ್ರ ಪ್ರಗತಿ ಸಾಧಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಭಾರತೀಯ ಜೈನ್ ಸಂಘಟನೆಯ ಜಯಶ್ರೀ ಷಾ ತಿಳಿಸಿದರು.

ಭಾರತೀಯ ಜೈನ್ ಸಂಘಟನೆ ಹಾಗೂ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರೌಢಾವಸ್ಥೆಯ ಹೆಣ್ಣು ಮಕ್ಕಳಿಗಾಗಿ ಎರಡು ದಿನಗಳ ಸ್ಮಾರ್ಟ್ ಗರ್ಲ್ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಾಗರಿಕ ಪ್ರಪಂಚದಲ್ಲೂ ಹೆಣ್ಣು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತಹ ಜೀವನ ಕೌಶಲ, ವ್ಯಕ್ತಿತ್ವ ವಿಕಸನವನ್ನು ಪ್ರೌಢಾವಸ್ಥೆಯಲ್ಲಿಯೇ ಬೆಳೆಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಗರ್ಲ್ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜ್ ಮಾತನಾಡಿ, ಹೆಣ್ಣು ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿಶೇಷ ತರಬೇತಿ ಕಾರ್ಯಾಗಾರವು ವಿದ್ಯಾರ್ಥಿನಿಯರಲ್ಲಿ ಹೊಸ ಬದಲಾವಣೆ ತರಲಿದೆ. ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಮುಂದಿನ ಜೀವನಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಶುಭಾ, ಅಧ್ಯಕ್ಷತೆ ವಹಿಸಿದ್ದ ಡಾ.ಮಹೇಶ್ ಮಾತನಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಹೊನ್ನಮ್ಮ, ಶಿಕ್ಷಕರಾದ ಮಂಜುನಾಥ್, ನಟರಾಜ್, ನಾಗರಾಜ್, ಮಹಾಂತೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net