ಶ್ರದ್ಧೆ, ಭಕ್ತಿಯಿಂದ ನಡೆದರೆ ಕಷ್ಟ ದೂರ

18Aratal1
Published on

ಅರಟಾಳ: ಮಾನವ ಜನ್ಮ ಶ್ರೇಷ್ಠವಾದುದು. ಜೀವನದುದ್ದಕ್ಕೂ ಸಂಸಾರದ ಜತೆಗೆ ಪಾರಮಾರ್ಥ ಸಾಧನೆ ಮಾಡುತ್ತ ಸಾಗಿದರೆ ಅಮೋಘಸಿದ್ಧೇಶ್ವರರ ದರ್ಶನವಾಗುತ್ತದೆ ಎಂದು ಬಾಡಗಿ ಸಿದ್ಧಾಶ್ರಮದ ಬಣಸಿದ್ಧ ಮಹಾರಾಜರು ಹೇಳಿದರು.

ಸಮೀಪದ ಬಾಡಗಿ ಗ್ರಾಮದಲ್ಲಿ ಶ್ರೀ ಅಮೋಘಸಿದ್ಧೇಶ್ವರ ಜಾತ್ರೆ ನಿಮಿತ್ತ ಸೋಮವಾರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲವೂ ನನ್ನದೆ ಎನ್ನುವ ವ್ಯಾಮೋಹ ಬಿಟ್ಟಾಗ ಗುರುವಿನ ಆಶೀರ್ವಾದ ದೊರೆಯುತ್ತದೆ. ಭಕ್ತಿಯಿಂದ ನಡೆದುಕೊಂಡಿರುವವರ ಕಷ್ಟಗಳು ಕರಗುತ್ತವೆ. ನಿತ್ಯ ದೇವರ ಸ್ಮರಣೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ದೇವರ ದಾಸರಾದರೆ ಸಂಸಾರ ಸುಖವಾಗಿರುತ್ತದೆ ಎಂದರು.

ಅರ್ಚಕ ಈರಪ್ಪ ಮುಧೋಳ, ಗ್ರಾಪಂ ಸದಸ್ಯ ಸಿದ್ದು ಹಳ್ಳಿ, ರಾಮಚಂದ್ರ ಬಿಜ್ಜರಗಿ, ಯಲ್ಲಪ್ಪ ಪಡಸಲಗಿ, ಸಿದ್ದು ಜೋಗಾಣಿ, ಮಲ್ಲಪ್ಪ ಕೋಳಿಕಾರ, ನಾಗಪ್ಪ ಮುಧೋಳ, ತುಕ್ಕಪ್ಪ ಹಿರೇಕುರಬರ, ಮಲ್ಲಪ್ಪ ಪೂಜಾರಿ, ದುಂಡಪ್ಪ ಸತ್ತಿಗೇರಿ, ಸಿದ್ದಪ್ಪ ಚಮಕೇರಿ, ಸಜೀವ ಪೂಜಾರಿ, ರೇಣುಕಾ ಡಂಬಳಗಾರ, ವರ್ಷಣಿ ಬಿಜ್ಜರಗಿ, ಮಾನಂದ ಮುಧೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net