ಯೋಗ್ಯ ಬೆಲೆ ಸಿಗದಿದ್ದರೆ ಭೂಸ್ವಾಧಿನಕ್ಕೆ ಬಿಡೆವು

2kittur3
Published on

ಚನ್ನಮ್ಮನ ಕಿತ್ತೂರು: ಧಾರವಾಡ&ಬೆಳಗಾವಿ ನಡುವೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿರುವ ಹೊಸ ರೈಲು ಯೋಜನೆಗೆ ಚನ್ನಮ್ಮನ ಕಿತ್ತೂರು ತಾಲೂಕಿನ ಜಮೀನು ಭೂಸ್ವಾಧಿನ ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಎಕರೆಗೆ 35 ಲ ರೂ. ಬೆಲೆ ನಿಗದಿಪಡಿಸಿದ್ದು, ಅದು ಭೂಮಿಯ ಮೌಲ್ಯಕ್ಕೆ ತಕ್ಕಂತಿಲ್ಲ. ಹಾಗಾಗಿ ಪ್ರತಿ ಗುಂಟೆಗೆ 3 ಲ ರೂ. ನಿಗದಿಪಡಿಸಬೇಕೆಂದು ಎಂದು ಒತ್ತಾಯಿಸಿ ವಿವಿಧ ರೈತ ಸಂಟನೆಗಳು ಒತ್ತಾಯಿಸಿವೆ.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಪಾದಯಾತ್ರೆ ಮೂಲಕ ತಹಸೀಲ್ದಾರ್​ ಕಚೇರಿಗೆ ಆಗಮಿಸಿ ತಹಸೀಲ್ದಾರ್​ ಮೂಲಕ ಬೆಂಗಳೂರಿನ ಕರ್ನಾಟಕ ಪ್ರದೇಶಾಭಿವದ್ಧಿ ಮಂಡಳಿಯ ವಿಶೇಷ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದವು.

ಸರ್ಕಾರ ಈಗಾಗಲೇ ಎಕರೆಗೆ 35 ಲ ರೂ. ಬೆಲೆ ಕಟ್ಟಿದ್ದು, ನಮ್ಮ ಜಮೀನುಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗೆ ಹತ್ತಿಕೊಂಡಿವೆ. ಲವತ್ತಾದ ಮಣ್ಣು, ನಿವೇಶನಕ್ಕೆ ಅರ್ಹವಾದ ಜಮೀನಾಗಿದೆ. ಕೊಳವೆಬಾವಿಗಳು, ಗಿಡಗಳು, ಪೈಪ್​ಲೈನ್​ಗಳಿಗೆ ನ್ಯಾಯದ ದರ ಒದಗಿಸಬೇಕು. ಯೋಗ್ಯ ಬೆಲೆ ನಿಗದಿಪಡಿಸದಿದ್ದರೆ ನಾವು ರೆಲು ಮಾರ್ಗಕ್ಕೆ ಜಮೀನು ನೀಡುವುದಿಲ್ಲ. ಕಿತ್ತೂರಿನ ಸಮೀಪದ ಪ್ರವಾಸಿಗರಿಗೆ ಅನುಕೂಲವಾಗಲು ರೈಲ್ವೆ ನಿಲ್ದಾಣ ಸ್ಥಾಪನೆ ಮಾಡಬೇಕು ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

ರೈತ ಸಂಟನೆಗಳ ಮುಖಂಡರಾದ ಎಂ.ಎ್​. ಜಕಾತಿ, ಅಪ್ಪೇಶ ದಳವಾಯಿ, ಬಸವರಾಜ ಮೊಕಾಶಿ, ಬೀರಪ್ಪ ದೇಶನೂರ, ಮಡಿವಾಳಪ್ಪ ವಕ್ಕುಂದ, ಎಂ.ಎ. ಉಸ್ತಾದ ಮಾತನಾಡಿದರು. ಬಿಷ್ಠಪ್ಪ ಶಿಂದೆ, ಮಡಿವಾಳಪ್ಪ ವರಗನ್ನವರ, ಕೀರಪ್ಪ ಜಾಂಗಟಿ, ನಿಂಗಪ್ಪ ಹಣಜಿ, ವಿಜಯಕುಮಾರ ಶಿಂಧೆ, ಜಿ.ಎಸ್​. ಹಿರೇಮಠ, ಅದೃಶ್ಯಯ್ಯ ಹಿರೇಮಠ, ಮಡಿವಾಳಯ್ಯ ಕೇರಿಮಠ ಇತರರಿದ್ದರು.

ತಾರತಮ್ಯವಾಗದಿರಲಿ

ತಹಸೀಲ್ದಾರ್​ ಕಚೇರಿಗೆ ಆಗಮಿಸಿದ ಶಾಸಕ ಬಾಬಾಸಾಹೇಬ ಪಾಟೀಲ ರೈತರ ಮನವಿಗೆ ಸ್ಪಂದಿಸಿ ಮಾತನಾಡಿ, ರೆಲು ಮಾರ್ಗಕ್ಕೆ ಬೇಕಾಗುವ ಭೂಸ್ವಾಧಿನವಾಗುವ ಜಮೀನಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಸಬೇಕು. ಸ್ವಾಧಿನಪಡಿಸಿಕೊಂಡ ಜಮೀನು ಪಕ್ಕಕ್ಕೆ ಅಲ್ಪ ಸ್ವಲ್ಪ ಜಮೀನಿದ್ದರೆ ಅದನ್ನೂ ವಶಪಡಿಸಿಕೊಳ್ಳಬೇಕು. ಯಾವ ರೈತರಿಗೂ ತಾರತಮ್ಯವಾಗದಂತೆ ಬೆಲೆ ನಿಗದಿ ಮಾಡಬೇಕು. ನಾನೂ ರೈತರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳ ಜತೆಗೆ ಮಾತನಾಡುತ್ತೇನೆ. ರೈತರ ಜತೆ ನಿಲ್ಲುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net