ಕೌಶಲವಿದ್ದರೆ ವೃತ್ತಿಯಲ್ಲಿ ಬೆಳವಣಿಗೆ ಸಾಧ್ಯ

2Jaggu7
ಬೆಳಗಾವಿ ಕೆಎಲ್‌ಇ ಫಾರ್ಮಸಿ ಕಾಲೇಜಿನ ಫಾರ್ಮಾಸ್ಯೂಟಿಕ್ಸ್ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಫಾರ್ಮಸಿಸ್ಟ್‌ಗಳ ವೃತ್ತಿಪರ ಬೆಳವಣಿಗೆ ಪ್ರೋತ್ಸಾಹಿಸುವ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಗೀತಾಂಜಲಿ ಸಾಲಿಮಠ, ಡಾ.ವೈಶಾಲಿ ಪಾಕಣ್ಣವರ, ಡಾ.ಎಂ.ಬಿ.ಪಾಟೀಲ, ಡಾ.ಪಿ.ಎಂ.ದಂಡಗಿ, ಡಾ.ಸುನೀಲ ಜಲಾಲಪುರೆ ಇತರರಿದ್ದರು.
Published on

ಬೆಳಗಾವಿ: ಫಾರ್ಮಸಿಸ್ಟ್‌ಗಳ ವೃತ್ತಿಪರ ಬೆಳವಣಿಗೆ ಪ್ರೋತ್ಸಾಹಿಸಲು ತೆಗೆದುಕೊಳ್ಳುವ ವಿಧಾನಗಳ ಕುರಿತು ಕೆಎಲ್‌ಇ
ಫಾರ್ಮಸಿ ಕಾಲೇಜಿನ ಫಾರ್ಮಾಸ್ಯೂಟಿಕ್ಸ್ ವಿಭಾಗದಲ್ಲಿ ಫಾರ್ಮಸಿ ಎಜುಕೇಶನ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ಕಾರ್ಯಾಗಾರ ಜರುಗಿತು.

ಜೈನ್ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ವೈಶಾಲಿ ಪಾಕಣ್ಣವರ ಮಾತನಾಡಿ, ನಿರಂತರ ಕಲಿಕೆ, ಕೌಶಲದಿಂದ ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಬೆಳವಣಿಗೆ ಹೊಂದಬೇಕು. ಆರೋಗ್ಯ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು ಫಾರ್ಮಸಿಸ್ಟ್‌ಗಳ ವೃತ್ತಿಪರತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಉಪ ಪ್ರಾಚಾರ್ಯ ಡಾ.ಎಂ.ಬಿ.ಪಾಟೀಲ, ನೂತನ ಪಠ್ಯಕ್ರಮವನ್ನು ಆಧುನಿಕ ಶಿಕ್ಷಣ ಶಾಸ್ತ್ರಗಳೊಂದಿಗೆ ರೂಪಿಸಲು ಮತ್ತು ಜಾರಿಗೆ ತರುವ ಬಗ್ಗೆ ಮಾತನಾಡಿದರು. ಕೆಎಲ್‌ಇ ಫಾರ್ಮಸಿ ಕಾಲೇಜು ಸಂಚಾಲಕಿ ಗೀತಾಂಜಲಿ ಸಾಲಿಮಠ, ಕಾಲೇಜು, ಫಾರ್ಮಸಿ ಎಜುಕೇಶನ್ ವಿಭಾಗದ ಉದ್ದೇಶಗಳು ಮತ್ತು ಕಾರ್ಯಗಳ ಕುರಿತು ಮಾತನಾಡಿದರು. ಫಾರ್ಮಾಸ್ಯೂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಪಿ.ಎಂ.ದಂಡಗಿ, ಕೆಎಲ್‌ಇ ಫಾರ್ಮಸಿ ಕಾಲೇಜು ಪ್ರಾಚಾರ್ಯ ಡಾ.ಸುನೀಲ ಜಲಾಲಪುರೆ, ಕಿಶೋರಿ ಸುತಾರ, ರವಿಕಿರಣ ಕಣಬರ್ಗಿ, ಕಾಲೇಜಿನ ಎಲ್ಲ ಬೋಧಕ ಸಿಬ್ಬಂದಿ ಇದ್ದರು. ವಿವಿಧ ಫಾರ್ಮಸಿ ಸಂಸ್ಥೆಗಳ ಸುಮಾರು 40 ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net