

ಪರಮಾನಂದವಾಡಿ: ಸಂಸ್ಕೃತಿ ಮಾನವನ ಸಾಮಾಜಿಕ ಪರಂಪರೆಯ ಜೈವಿಕ ವ್ಯವಸ್ಥೆಯಾಗಿದೆ. ಹೀಗಾಗಿ, ಪ್ರತಿಯೊಬ್ಬರು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಕೌಶಲಗಳು ಬಹುಮುಖ್ಯವಾಗಿವೆ ಎಂದು ಪ್ರೊ.ಅಶೋಕ ಕಾಂಬಳೆ ಹೇಳಿದರು.
ಗ್ರಾಮದ ಜೆ.ಪಿ.ಶಿರಗೂರಕರ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಚಟುವಟಿಕೆ, ಎನ್‌ಎಸ್‌ಎಸ್ ಘಟಕ, ರೆಡ್ ಕ್ರಾಸ್, ಐಕ್ಯೂಸಿ ಘಟಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಐಕ್ಯೂಸಿ ಸಂಯೋಜಕ ಡಿ.ಎಂ.ದುರದುಂಡಿ ಮಾತನಾಡಿ, ಶಾಲೆಯಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣದ ಅರಿವು ಮತ್ತು ಗುಣಾತ್ಮಕ ಆದರ್ಶ ನೀಡಿ ಅವರನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎಸ್.ಎಂ.ಪಾಟೀಲ ಮಾತನಾಡಿದರು. ಪ್ರಾಚಾರ್ಯ ರಾಜು ಕಾಂಬಳೆ, ಎನ್.ಬಿ.ಕುಸನಾಳೆ, ಎ.ಎಲ್.ಶಿರಹಟ್ಟಿ, ಕೆ.ವಿ.ಘಟಕಾಂಬಳೆ, ಬಸವರಾಜ ಕಾಂಬಳೆ, ವಿಜಯ ದಳವಾಯಿ, ನಿಂಗಪ್ಪ ಬಂಡಗಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಾರುತಿ, ಶಿಲ್ಪಾ ವಠಾರೆ, ಶಿವಾನಂದ, ದೀಕ್ಷಾ ಗಂಡೋಶಿ, ಶಿವಾನಂದ ತೇರದಾಳ, ತನುಜಾ ಕಲಕೇರಿ ಇತರರಿದ್ದರು.