

ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆ ಮತ್ತು ಅಖಿಲ ಭಾರತ ಅಧಿವಕ್ತಾ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಹುಬ್ಬಳ್ಳಿ ಘಟಕದ ಆಶ್ರಯದಲ್ಲಿ ನಗರದ ಕೇಶ್ವಾಪೂರದ ಐಸಿಎಐ ಭವನದ ಸಭಾಂಗಣದಲ್ಲಿ ಇತ್ತೀಚೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ರವೀಂದ್ರ ಡಿ. ಅರಿ ಅವರು ಮಾತನಾಡಿ, ಕುಟುಂಬದಲ್ಲಿ ನೆಮ್ಮದಿ ಹಾಗೂ ಸಂತೋಷವಿದ್ದರೆ ಸಕ್ಕರೆ ಸೇರಿ ಇತರ ಯಾವುದೇ ಕಾಯಿಲೆಗಳು ಬರುವುದಿಲ್ಲ. ಹಾಗಾಗಿ ಕಾಯಿಲೆ ಬಾರದಂತೆ ನಾವು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಖ್ಯಾತ ಹೃದಯ ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಮಾತನಾಡಿ, ವೈದ್ಯಕೀಯ ಸಲಹೆ ಮತ್ತು ಆರೈಕೆ ಎಲ್ಲ ವರ್ಗದ ಜನರಿಗೆ ಅಗತ್ಯ. ಹಾಗಾಗಿ ಆಳುವ ಸರ್ಕಾರಗಳು, ಉಚಿತವಾಗಿ ವೈದ್ಯಕೀಯ ಸೌಲಭ್ಯ ಕಲ್ಪಿಸುವತ್ತ ದೃಷ್ಟಿ ಹರಿಸಬೇಕು. ಇದು ಬಿಟ್ಟು ವೃಥಾ ರಾಜಕಾರಣ ಮತ್ತು ಜಾತಿ ಮೀಸಲಾತಿ ವಿಷಯ ತರಬಾರದು ಎಂದರು.
ಇದೇ ವೇಳೆ ನ್ಯಾಯಾಧೀಶ ರವೀಂದ್ರ ಡಿ. ಅರಿ ಹಾಗೂ ಹೃದಯ ರೋಗ ತಜ್ಞ ಡಾ.ಜಿ.ಬಿ. ಸತ್ತೂರ ಅವರನ್ನು ಗೌರವಿಸಲಾಯಿತು.
ಪ್ರಾಂತದ ಮುಖ್ಯ ಸಂಚಾಲಕ ವಿಠ್ಠಲ್ ನಾಯಕ್ ಅವರು ಪರಿಷತ್ತಿನ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.
ಹುಬ್ಬಳ್ಳಿ ಐಸಿಎಐ ಶಾಖೆ ಅಧ್ಯಕ್ಷ ಧನಪಾಲ್ ಮುನ್ನೊಳ್ಳಿ, ಕಾರ್ಯದರ್ಶಿ ರಿಷಬ್ ಉಪಾಧ್ಯಾಯ, ಅಧಿವಕ್ತಾ ಪರಿಷತ್ ಧಾರವಾಡ ಭಾಗದ ಪ್ರಮುಖ ನಾರಾಯಣ ಸಾಳುಂಕೆ, ಉತ್ತರ ಕರ್ನಾಟಕ ಮಹಿಳಾ ವಿಭಾಗದ ಪ್ರಮುಖ ಮಂಜುಳಾ ಪಡೆಸೂರ, ರೂಪಾ ಢವಳಗಿ ಇತರರು ಇದ್ದರು.
ಆಶಾ ಹಾರ್ಟ್ ಆ್ಯಂಡ್ ಡಯಾಬಿಟಿಸ್ ಫೌಂಡೇಷನ್ ವತಿಯಿಂದ ಆರೋಗ್ಯ ತಪಾಸಣೆ ನಡೆಯಿತು. ಸುಮಾರು 150 ಜನರು