ಆಸಕ್ತಿ, ಛಲ ಇದ್ದರೆ ಯಶಸ್ಸು

h16-rotary
Published on

ಹುಬ್ಬಳ್ಳಿ: ನವನಗರ ರೋಟರಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಶನಿವಾರ ಏರ್ಪಡಿಸಲಾಗಿತ್ತು.
ರಾಷ್ಟ್ರಮಟ್ಟದ ಕ್ರೀಡಾಪಟು ಮಹಾಬಲೇಶ್ವರ ಹೆಗಡೆಕರ ಉದ್ಘಾಟಿಸಿ ಮಾತನಾಡಿ, ಕಷ್ಟಪಟ್ಟರೆ ಯಶಸ್ಸು ಸಿಗುತ್ತದೆ. ಶ್ರದ್ಧೆ, ಆಸಕ್ತಿ, ಛಲ ಇದ್ದರೆ ಸಾಧನೆ ಖಂಡಿತ. ಮಕ್ಕಳಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದಕ್ಕಾಗಿ ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ನವನಗರ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಸ್. ಪಾಟೀಲ, ಪದಾಧಿಕಾರಿಗಳಾದ ಎಸ್.ವಿ. ಶಿರಗುಪ್ಪಿ, ಆರ್.ಎಚ್. ರಿತ್ತಿ, ಎಂ.ಎಫ್. ಮನಗುಂಡಿ, ಗಿರೀಶ ಬೊಮ್ಮನಗೌಡರ, ಡಾ.ಕೆ.ಪಿ. ಅಣ್ಣಿಗೇರಿ, ಒ.ಜಿ. ಪಾಟೀಲ, ಜಿ.ಜಿ. ಹೆಗಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net