

ಸವದತ್ತಿ: ಪ್ರೀತಿ, ದಯೆ, ಸಹನೆ, ಅನುಕಂಪ, ಸಹಬಾಳ್ವೆ, ಕರುಣೆಯಂತಹ ಗುಣಗಳಿದ್ದವರು ಮಾತ್ರ ಮನುಷ್ಯರೆನಿಸಿಕೊಳ್ಳುತ್ತಾರೆ. ಆದರೆ, ಪ್ರಸ್ತುತ ಸಮಾಜದಲ್ಲಿ ಈ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದು ಪ್ರಾಚಾರ್ಯ ಹಾಗೂ ಜಾನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಎಸ್‌ವಿಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಸವದತ್ತಿಯ ಸಹದಯ ಪ್ರತಿಷ್ಠಾನ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ನಾಗೇಶ ನಾಯಕ ಅವರ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದಲ್ಲಿ ಒಬ್ಬ ಮನುಷ್ಯ ಇತರರು ತನ್ನಂತೆ ಭಾವಿಸಿಲ್ಲ ಹಾಗೂ ಮುಟ್ಟಿಸಿಕೊಂಡಿಲ್ಲ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್‌ರಂತಹ ಮಹನೀಯರು ಜಾತಿ, ಮತ, ಲಿಂಗಭೇದ ತೊಡೆದುಹಾಕಲು ಹೋರಾಡಿದರು. ಸಾಹಿತಿ ನಾಗೇಶ ಈ ಇವುಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಎಂದರು. ನೇಸರಗಿ ಪ್ರಾಚಾರ್ಯ ಡಾ.ಎ್.ಡಿ. ಗಡ್ಡಿಗೌಡರ ಕೃತಿ ಪರಿಚಯಿಸಿ ಮನುಷ್ಯತ್ವ ಇದ್ದವರು ಮಾತ್ರ ದೇವರಾಗಲು ಸಾಧ್ಯ. ಹದಯ ಶ್ರೀಮಂತಿಕೆ ಸಮಾಜ ಕಟ್ಟಬೇಕಾಗಿದೆ ಎಂದು ಕವನ ಸಂಕಲನ ತಿಳಿಸುತ್ತದೆ ಎಂದರು.
ಪ್ರಾಚಾರ್ಯ ಡಾ.ಎನ್.ಆರ್. ಸವತಿಕರ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ಜಾಕೀರ್ ನದ್ಾ, ವಿಠ್ಠಲ ಬಸಳಿಗುಂದಿ ಅವರನ್ನು ಸನ್ಮಾನಿಸಲಾಯಿತು. ರಮ್ಯಾ ಹಿರೇಮಠ, ರಾಜೇಶ್ವರಿ ಕೊಳ್ಳಿ, ಪ್ರೊ.ಕೆ.ರಾಮರೆಡ್ಡಿ, ವಚನ ಬಸಿಡೋಣಿ, ಐಐಸಿ ಘಟಕದ ಅಧ್ಯಕ್ಷೆ ಡಾ.ಅರುಂಧತಿ ಬದಾಮಿ, ಐಕ್ಯೂಎಸಿ ಸಂಯೋಜಕ ಎ.ಎ. ಹಳ್ಳೂರ, ಡಾ.ವೈ.ಎಂ. ಯಾಕೊಳ್ಳಿ, ಮೋಹನ ಪಾಟೀಲ, ಮಲ್ಲಿಕಾರ್ಜುನ ಬೀಳಗಿ, ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸದಸ್ಯರು, ವಿದ್ಯಾರ್ಥಿಗಳು ಇದ್ದರು.