

ಹೊಳೆನರಸೀಪುರ: ತಾಲೂಕಿನ ದೊಡ್ಡಕಾಡನೂರು ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕ ಆರ್.ಬಿ.ಪುಟ್ಟಮಾದಪ್ಪ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಅರಿವು ಇಲ್ಲದೆ ಇರುವುದರಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ. ಕೆಲವರು ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುತ್ತಾರೆ, ರಸ್ತೆ ದಾಟುತ್ತಾರೆ. ಇದರಿಂದ ಅಪಘಾತಗಳು ನಡೆಯುತ್ತವೆ. ವಾಹನ ಚಾಲನೆ ಮಾಡುವವರು ತಾಳ್ಮೆಯಿಂದ ರಸ್ತೆ ಸುರಕ್ಷತೆಯ ನಿಯಮಗಳನ್ನು ಅನುಸರಿಸಿ ವಾಹನ ಚಾಲನೆ ಮಾಡಿದರೆ ಅವಘಡಗಳನ್ನು ತಡೆಯಬಹುದು. ಅಪಘಾತ ಸಂಭವಿಸಿದರೆ, ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು 18 ವರ್ಷ ತುಂಬುವ ಮೊದಲು ವಾಹನ ಚಾಲನೆ ಮಾಡಬಾರದು. ಇದರಿಂದ ವಾಹನ ಮಾಲೀಕರು ಮತ್ತು ಪಾಲಕರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದು ತಿಳಿಸಿದರು.
ಹಿರಿಯ ಕನ್ನಡ ಉಪನ್ಯಾಸಕ ಎಂ ಮಹೇಶ ಮಾತನಾಡಿದರು. ಬಿಸಿಎಂ ವಿದ್ಯಾರ್ಥಿ ನಿಲಯದ ರಾಜುಗೌಡ ಇತರರು ಇದ್ದರು.