ಸಮಸ್ಯೆ ಇದ್ದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತರಲಿ

 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಎನ್.ಜೆ.ಶೋಭಾ ಮಾತನಾಡಿದರು,
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಎನ್.ಜೆ.ಶೋಭಾ ಮಾತನಾಡಿದರು,
Published on

ಹಿರೀಸಾವೆ: ಶಾಲೆಯೊಳಗೆ ಅಥವಾ ಹೊರಗೆ ಯಾವುದೇ ಸಮಸ್ಯೆ ಇದ್ದಲ್ಲಿ ವಿದ್ಯಾರ್ಥಿಗಳು ತಕ್ಷಣ ಶಿಕ್ಷಕರು ಇಲ್ಲವೇ ಪಾಲಕರ ಗಮನಕ್ಕೆ ತರುವುದು ಅಗತ್ಯ ಎಂದು ಸಹಶಿಕ್ಷಕಿ ಎನ್.ಜೆ.ಶೋಭಾ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆ ತಿಳಿಸಿದರೆ ಬಗೆಹರಿಸಿ ಮಕ್ಕಳನ್ನು ಸಂರಕ್ಷಿಸಲು ಅನುಕೂಲ ಎಂದರು.

ಮನೆಯಿಂದ ಶಾಲೆಗೆ ತೆರಳುವ ಅಥವಾ ಎಲ್ಲಿಯಾದರೂ ಸಂಚರಿಸುವ ವೇಳೆ ರಸ್ತೆಯ ಎಡ ಬದಿಯಲ್ಲಿ ಮಾತ್ರವೇ ಸಾಗಬೇಕು. ರಸ್ತೆ ದಾಟುವ ಸಮಯದಲ್ಲಿ ಎರಡೂ ಕಡೆ ವೀಕ್ಷಿಸಿ ಸುರಕ್ಷಿತವಾಗಿ ಮತ್ತೊಂದು ಬದಿಗೆ ಸಾಗಬೇಕು. ಇದರಿಂದ ಅಪಘಾತಗಳು ಸಂಭವಿಸದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.

ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳು ಸಿಕ್ಕಿ ಕರೆದರೆ ಹೋಗಬಾರದು. ಪರಿಚಯವೇ ಇಲ್ಲದ ಯಾರಾದರೂ ಚಾಕೊಲೇಟ್ ಇಲ್ಲವೇ ಏನಾದರೂ ತಿನಿಸು ನೀಡಿದರೆ ಸ್ವೀಕರಿಸಬಾರದು ಎಂದರು.

ಬಾಲ ಕಾರ್ಮಿಕ ಪದ್ಧತಿ ಅಕ್ಷಮ್ಯ ಅಪರಾಧವಾಗಿದ್ದು, ಮಕ್ಕಳ ಶಿಕ್ಷಣ ತಪ್ಪಿಸಿ ಕೆಲಸಕ್ಕೆ ಸೇರಿಸಿದರೆ ಅಥವಾ ಸೇರಿಸಿಕೊಂಡರೆ ಅಂತಹವರು ಕಾನೂನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಶಿಕ್ಷಕಿ ಉಮಾ, ಸಹ ಶಿಕ್ಷಕರಾದ ದೇವರಾಜು, ಎಲ್.ಎಸ್.ಧರ್ಮೇಶ್, ವಿನಯ ಎಂ.ಗುನಗ, ಗೌರಮ್ಮ, ದೇವಕಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net