

ಅಥಣಿ ಗ್ರಾಮೀಣ: ಹಾಕಿಕೊಂಡ ಗುರಿ ಸಾಧಿಸಿದಾಗ ಶಿಕ್ಷಣ ಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕ. ಗೌರವ ನಮ್ಮನ್ನು ಮಾನವೀಯವಾಗಿ ಹುಡುಕಿಕೊಂಡು ಬರುವ ರೀತಿಯಲ್ಲಿ ಪ್ರಾಧ್ಯಾಪಕರು ಶಿಕ್ಷಣ ಬೇಕು ಎಂದು ಸಂಪನ್ಮೂಲ ವ್ಯಕ್ತಿ ಪ್ರೊ. ಎಸ್.ಡಿ. ಗಾಣಿಗೇರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರಾಧ್ಯಾಪಕರಿಗೆ ವತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಗುರಿ ಸ್ಪಷ್ಟವಿದ್ದರೆ ಬದುಕಿಗೆ ಅರ್ಥ ಬರುತ್ತದೆ ಎಂದರು. ಗಣಕಶಾಸ್ತ ಸಹಾಯಕ ಪ್ರಾಧ್ಯಾಪಕ ಎಸ್.ಪಿ. ಸಜ್ಜನ ಮಾತನಾಡಿ, ಪ್ರತಿಯೊಬ್ಬರೂ ಕೌಶಲ ಮತ್ತು ಪ್ರತಿಭೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಪ್ರೊ. ಕಪಿಲ ಕಾಂಬಳೆ, ಐಕ್ಯೂಎಸಿ ಸಂಚಾಲಕಿ ಪ್ರೊ. ಡಾ. ವಿದ್ಯಾಶ್ರೀ ಕೋಲಕಾರ ಮಾತನಾಡಿದರು. ಪ್ರಾಚಾರ್ಯ ಪರಪ್ಪ ಮಗದುಮ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಲಕ್ಷ್ಮೀ. ಆರ್, ಡಾ. ಪ್ರಭಾಕರ ಖ್ಯಾಡಿ, ಮಂಜುನಾಥಸ್ವಾಮಿ, ಶ್ರೀಕಾಂತ ಜಾಧವ, ಎಸ್.ಆರ್. ಗಡದೆ, ಕೆ.ಟಿ.ಶೇಡಶಾಳೆ, ಮೀನಾ ಕುಲಕರ್ಣಿ, ಶೈಲಶ್ರೀ ತುಬಚಿ, ಭಾಗ್ಯವತಿ ಎಂ., ರಮೇಶ ಸಕ್ರಿ, ರಶ್ಮಿ ಹಾದಿಮನಿ, ವಿನೋದಕುಮಾರ ಮೇತ್ರಿ, ವೈಶಾಲಿ ಅಪರಾಜ ಇತರರಿದ್ದರು.