ಮೌಲ್ಯಗಳಿದ್ದರೆ ಬದುಕು ಸಾರ್ಥಕ

Published on

ಉಳ್ಳಾಗಡ್ಡಿ-ಖಾನಾಪುರ: ಸಾಧನೆಯ ಮೆಟ್ಟಿಲೇರಲು ಪರಿಶ್ರಮದಿಂದ ಕಾರ್ಯ ನಿರ್ವಹಿಸಬೇಕು. ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರಿಂದ ಬದುಕಿನ ಸಾರ್ಥಕ್ಯ ಹೆಚ್ಚುತ್ತದೆ ಎಂದು ಡಾ.ಆನಂದ ಮಹಾರಾಜ ಗೋಸಾವಿ ಹೇಳಿದರು.

ಪಟ್ಟಣದ ಹತ್ತರಗಿ ಹರಿಮಂದಿರ ಸಭಾಭವನದಲ್ಲಿ ಶ್ರೀ ಹರಿಕಾಕಾ ಗೋಸಾವಿ ಋಗ್ವೇದಿ ಭಾಗವತ(ವೈಷ್ಣವ) ಮಠ ಹತ್ತರಗಿ-ಯಮನಮರಡಿ ಮತ್ತು ದಿ.ಯಮಕನಮರಡಿ ಲಕ್ಷ್ಮೀ ಅರ್ಬನ್ ಕೋ-ಆಪ್ ಕ್ರೆಡಿಟ್ ಸೌಹಾರ್ದ ಸಹಕಾರಿಗಳ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮನುಷ್ಯ ಸಮಾಜಮುಖಿಯಾಗಿ ಬೆಳೆದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಹಿಡಕಲ್ ಡ್ಯಾಮ್ ಸಂತ ಮಿಖಾಯಲ್ ಚರ್ಚ್ ಫಾದರ್ ಲೂರ್ದಸ್ವಾಮಿ ಮಾತನಾಡಿದರು.

ಪ್ರಾಚಾರ್ಯ ಕಿರಣ ಚೌಗಲಾ, ಯುವಧುರೀಣ ರವಿ ಜಿಂಡ್ರಾಳಿ, ಸಿಪಿಐ ಜಾವೇದ ಮುಷಾಪುರಿ, ನಮೃತಾ ದೇಸಾಯಿ, ಪಿಡಿಒ ಆನಂದ ಹೊಳೆನ್ನವರ, ಗ್ರಾಪಂ ಅಧ್ಯಕ್ಷ ಸಮೀಪ ಬೇಪಾರಿ, ಹುಕ್ಕೇರಿ ತಾಪಂ ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ಸುರೇಶ ನೇರ್ಲಿ, ಸಾಕ್ಷಿ ನೇರ್ಲಿ, ಸಿದ್ದು ಶಿಂಧೆ, ಸಮರ್ಥ ಜಿಂಡ್ರಾಳಿ, ದೀಪಕ ನಾಡಗೌಡ, ಗೋಪಾಲ ಚಿಪಣಿ, ಗಿರೀಶ ಕರೋಶಿ, ರವಿಂದ್ರ ಮಾಳಗಿ, ರವೀಂದ್ರ ಮಲಾಜಿ, ಓಂಕಾರ ಭೂವಿ, ರಾಜು ವಾಕುಡೆ, ಎ.ಎಂ.ಕರ್ನಾಚಿ, ಪ್ರಭುಲಿಂಗ ಖೋತ ಇತರರಿದ್ದರು. ಸುನೀಲ ದೇಸಾಯಿ ಸ್ವಾಗತಿಸಿದರು. ಎಸ್.ಆರ್.ತಬರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net