ಯುದ್ಧ ಮುಂದುವರಿದರೆ ಬೆಲೆ ಏರಿಕೆ ಸಂಭವ

11ckd1
Published on

ಚಿಕ್ಕೋಡಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪರಿಣಾಮವಾಗಿ ದೇಶದಲ್ಲಿ ಬೆಲೆ ಏರಿಕೆ ಆಗಲಿದೆ ಎಂದು ಮಾಜಿ ಸೈನಿಕ ವಿಜಯಕುಮಾರ ಈಟಿ ತಿಳಿಸಿದರು.

ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡು ಜಾಗೃತಿ ವಹಿಸುವುದು ಅವಶ್ಯಕ. ಹೀಗೆ ಯುದ್ಧ ಮುಂದುವರಿದರೆ ವಿದ್ಯುತ್, ಪೆಟ್ರೋಲ್, ಗ್ಯಾಸ್, ಡೀಸೆಲ್ ಹಾಗೂ ವಿವಿಧ ವಸ್ತುಗಳ ಕೊರತೆಯಾದ ಸಂದರ್ಭದಲ್ಲಿ ಜನ ಹೇಗೆ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.

ಗ್ರಾಮ ಆಡಳಿತ ಸದಸ್ಯ ಬಸವಣ್ಣಿ ಕುಂಬಾರ ಮಾತನಾಡಿದರು. ಶಂಕರ ಗಿರಿಜಾಯಿ, ಚಂದ್ರಶೇಖರ ಅರಭಾಂವಿ, ಭೀಮಪ್ಪ ಮನಗೂಳಿ, ಅರ್ಜುನ ಈಟಿ, ಮಲ್ಲಪ್ಪ ಕೊಟಬಾಗಿ, ಶಂಕರ ಪಾಟೀಲ, ಮಹಾಂತೇಶ ಚವ್ಹಾಣ, ಅಶೋಕ ಮಾಳಿ, ರವೀಂದ್ರ ಕೊಂಗಾಲೆ, ಸಿದ್ದಪ್ಪ ಶಿರಗಾಂವಿ, ಅಜಿತ್ ಜಾಧವ, ಪ್ರವೀಣ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net