

ಕುದೂರು: ಸರ್ಕಾರ ತನ್ನ ಜಾಣ ಕುರುಡುತನ ಬಿಟ್ಟು ಧರ್ಮಸ್ಥಳದ ಮೇಲೆ ಕುತಂತ್ರಿಗಳು ನಡೆಸಿರುವ ಪಿತೂರಿಯನ್ನು ಆದಷ್ಟು ಬೇಗ ತನಿಖೆ ನಡೆಸಿ ಸತ್ಯ ಬಿತ್ತರಗೊಳಿಸಿದರೆ ಸರ್ಕಾರದ ಕೆಲಸ ಮೆಚ್ಚುತ್ತೇವೆ. ಇಲ್ಲವಾದರೆ ಸರ್ಕಾರದ ಕೃಪಾಪೋಷಿತ ಕೆಲಸ ಅಂದುಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ನೆಲಮಂಗಲ ಮಾಜಿ ಶಾಸಕ ನಾಗರಾಜು ಹೇಳಿದರು.
ಸೋಲೂರು ಹೋಬಳಿ ಕೇಂದ್ರದಲ್ಲಿ ಸೋಮವಾರ ಧರ್ಮಸ್ಥಳ ಚಲೋ ಯಾತ್ರೆಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಚಾಲನೆ ನೀಡಿ ಮಾತನಾಡಿದ ಅವರು ಧರ್ಮನಿಷ್ಠೆ, ಆಧ್ಯಾತ್ಮಿಕ ನಂಬಿಕೆ ಹಾಗೂ ಜನರ ಭಾವನೆಗೆ ಧಕ್ಕೆಗೊಳಿಸುವ ಕೆಲಸ ಯಾರೇ ಮಾಡಿದರೂ ಅದು ತಪ್ಪು. ಇಂತಹ ಕೆಲಸಗಳನ್ನು ಪ್ರಚೋದಿಸುವುದು ಮತ್ತಷ್ಟು ತಪ್ಪು. ಹಿಂದುಗಳ ಮೇಲೆ ಇಂತಹ ದಾಳಿ ನಡೆದಾಗ ಈಗಿನ ಕಾಂಗ್ರೆಸ್ ಸರ್ಕಾರ ಮುಂದೆ ಬರುವುದಿಲ್ಲ. ಅದೇ ಅನ್ಯ ಧಮೀರ್ಯರಿಗೆ ಸ್ವಲ್ಪ ನೋವಾದರೂ ರಾಜಾರೋಷವಾಗಿ ಮಾತನಾಡುತ್ತಾರೆ. ಇದು ಕಾಂಗ್ರೆಸ್ ಸರ್ಕಾರದ ಮುಖವಾಡ ಎಂದರು.
ಜಿಲ್ಲಾ ರೈತ ಮೋರ್ಚಾ ಅಧ್ಯ ಕೆ.ಪಿ.ಬೃಂಗೇಶ್ ಮಾತನಾಡಿ, ಬಿಜೆಪಿ ರಾಜ್ಯಾಧ್ಯರ ಜತೆಗೂಡಿ ಸೋಲೂರು ಹೋಬಳಿ ಹಾಗೂ ನೆಲಮಂಗಲ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳ ಯಾತ್ರೆಗೆ ಕಾರು ಮತ್ತು ದ್ವಿಚಕ್ರ ವಾಹನದ ಮೂಲಕ ತೆರಳಿ ತಮ್ಮ ಸಹಮತವನ್ನು ವ್ಯಕ್ತಪಡಿಸಲು ಹೋಗುತ್ತಿದ್ದೇವೆ. ಮುಸುಕುಧಾರಿ ದೂರುದಾರ ಹಾಗೂ ಯೂಟ್ಯೂಬರ್ ಮೇಲೆ ನಿಧಾನಗತಿಯಲ್ಲಿ ಕೇಸ್ ದಾಖಲು ಮಾಡಿದ್ದು ಸರಿಯಲ್ಲ. ಅಪರಾಧಿಗಳಿಗೆ ಧರ್ಮಸ್ಥಳದ ಮಂಜುನಾಥ ಪಾಠ ಕಲಿಸುತ್ತಾನೆ ಎಂದರು.
ನೆಲಮಂಗಲ ತಾಲೂಕು ಬಿಜೆಪಿ ಅಧ್ಯ ಜಗದೀಶ್ ಚೌಧರಿ ಮಾತನಾಡಿ, ನಮ್ಮ ಸನಾತನ ಹಿಂದು ದೇವಸ್ಥಾನಗಳ ಬಗ್ಗೆ ಷಡ್ಯಂತ್ರ ನಡೆಯುತ್ತಿದ್ದರೂ, ಇದನ್ನು ಮಟ್ಟ ಹಾಕುವ ಕೆಲಸ ಸರ್ಕಾರ ಮಾಡಬೇಕು. ಧಾರ್ಮಿಕ ಭಾವನೆಗಳಿಗೆ ಹಾಗೂ ಬಹುಸಂಖ್ಯಾತ ಹಿಂದುಗಳ ರಣೆಗೆ ಸರ್ಕಾರ ಮುಂದಾಗದೆ ಹೋದರೆ ನಾವು ಯಾರನ್ನು ಪ್ರಶ್ನೆ ಮಾಡಬೇಕು. ಹೀಗಾಗಿ ನಮ್ಮ ಪದ ವತಿಯಿಂದ ಕರೆ ನೀಡಿರುವ ಹೋರಾಟಕ್ಕೆ ನಾವು ಸಹಮತ ವ್ಯಕ್ತಪಡಿಸುತ್ತಿದ್ದೇವೆ ಎಂದರು.
ಸೋಲೂರಿನ ಕೃಷ್ಣನೈವೇದ್ಯ ಹೋಟೆಲ್ ಬಳಿ ಕಾರ್ಯಕರ್ತರು ಉಪಾಹಾರ ಸೇವಿಸಿ ಧರ್ಮಸ್ಥಳದ ಮಂಜುನಾಥನಿಗೆ ಜೈಕಾರ ಮೊಳಗಿಸಿ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಹಾಸನ ಮಾರ್ಗವಾಗಿತೆರಳಿದರು.
ಇದೇ ವೇಳೆ ಮಂಜುಳಾ ಸುರೇಶ್, ಮಹೇಶ್, ಸೋಲೂರು ಉಮೇಶ್, ಲೋಕೇಶ್, ಕೆಂಪರಾಮಯ್ಯ, ಅರುಣ್ ಗೌಡ, ಮುನಿರಾಜು, ಮಧು, ಗ್ರಾಪಂ ಅಧ್ಯ ಅಶ್ವತ್ಥ್, ಮಂಜುನಾಥ್ ಇತರರು ಇದ್ದರು.