

ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯಿತಿಗೆ ಒಳಪಡುವ ೧ನೇ ಮೊಣ್ಣಂಗೇರಿಯ ಫೈರಿಂಗ್ ರೇಂಜ್ ರಸ್ತೆಯನ್ನು ಒಂದು ವಾರದೊಳಗೆ ದುರಸ್ತಿಪಡಿಸದಿದ್ದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ಅಥವಾ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಶರತ್ ಮಾತನಾಡಿ, ಫೈರಿಂಗ್ ರೇಂಜ್ ರಸ್ತೆಯಲ್ಲಿ ಹೊರ ರಾಜ್ಯದವರು ರೆಸಾರ್ಟ್ ಹಾಗೂ ವಿವಿಧ ಕಾಮಗಾರಿ ಮಾಡುತ್ತಿದ್ದಾರೆ. ಪ್ರತಿ ದಿನ ಕಿರಿದಾದ ರಸ್ತೆಯಲ್ಲಿ ಭಾರಿವಾಹನಗಳು(೧೦ ಚಕ್ರದ ವಾಹನ) ಓಡಾಡುತ್ತಿದೆ. ಪರಿಣಾಮ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿರುತ್ತದೆ. ಇದರಿಂದ ಗ್ರಾಮದ ಗ್ರಾಮಸ್ಥರಿಗೆ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಮುಂದಿನ ೧ ವಾರದೊಳಗೆ ರಸ್ತೆ ದುರಸ್ತಿಪಡಿಸದಿದ್ದಲ್ಲಿ ಗ್ರಾಮಸ್ಥರೊಡಗೂಡಿ ಪ್ರತಿಭಟನೆ ಅಥವಾ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಯಾಲದಾಳು ಧನಂಜಯ್, ಯಾಲದಾಳು ಉತ್ತಪ್ಪ, ದೀಕ್ಷಿತ್ ಗಾಳಿಬೀಡು, ಉಮೇಶ್ ಗುಡ್ಡೆಮನೆ, ಎ.ಡಿ.ಗಣಪತಿ ಉಪಸ್ಥಿತರಿದ್ದರು.